Home / ವಾರ್ತೆಗಳು (page 31)

ವಾರ್ತೆಗಳು

ಸುನ್ನಿ ವಕ್ಫ್ ಮಂಡಳಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ

ಲಕ್ನೊ,ನ.21: ಸುನ್ನಿ ವಕ್ಫ್ ಮಂಡಳಿ ಬಾಬರಿ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ತಿಳಿಸಿದೆ. ವರದಿಯಾಗಿರುವ ಪ್ರಕಾರ ಸುನ್ನಿ ವಕ್ಫ್ ಮಂಡಳಿಯ ಅಧ್ಯಕ್ಷ ಜಾಫರ್ ಫಾರೂಕಿ ಸುದ್ದಿ ಚ್ಯಾನಲೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯಾವುದೇ ಮರು ಪರಿಶೀಲನಾ ಅರ್ಜಿ ಸಲ್ಲಿಸದಿರಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ನಾವು ಯಾವಾಗಲು ಸುಪ್ರೀಂ ಕೋರ್ಟಿನ ತೀರ್ಪು ಸ್ವೀಕರಿಸುವೆವೆಂದು ಹೇಳುತ್ತಿದ್ದೆವು. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಜಾಫರ್ ಫಾರೂಕಿ ಹೇಳಿದ್ದಾರೆ. ಇದೇ ವೇಳೆ ಇನ್ನೋರ್ವ ಬಾಬರಿ …

Read More »

ಉತ್ತರಾಖಂಡದಲ್ಲಿ ಮುಸ್ಲಿಮರಿಗೆ ತೆರೆದ ಮೊದಲ ಯೋಗ ಕೇಂದ್ರ; ನಮಾಝಿಗೂ ಅವಕಾಶವಿದೆ

ಉತ್ತರಖಂಡ,ನ.20: ವಿಶ್ವದ ಮೊದಲ ಯೋಗ ಶಿಬಿರ ನವೆಂಬರ್ 20ಕ್ಕೆ ಉತ್ತರ ಖಂಡದ ಕೇದಾರ ನಗರದ ಕಣ್ವ ಆಶ್ರಮದಲ್ಲಿ ಆಯೋಜಿಸಲಾಗಿದ್ದು ಐದು ದಿವಸಗಳ ಯೋಗವನ್ನು ಮುಖ್ಯಮಂತ್ರಿ ತ್ರಿವೇಂದ್ರ್ ಸಿಂಗ್ ರಾವತ್ ಉದ್ಘಾಟಿಸಲಿರುವರು ಎನ್ನಲಾಗಿದೆ. ಕಣ್ವಾಶ್ರಮದ ಗುರುಕುಲ ಕುಲಪತಿ ಡಾ. ಜಯಂತ್ ಯೋಗಿರಾಜ ರವಿವಾರ ಪತ್ರಕರ್ತರಿಗೆ ಈ ಯೋಗ ಶಿಬಿರದ ಮಾಹಿತಿಯನ್ನು ನೀಡಿದ್ದಾರೆ. 500ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಭಾಗವಹಿಸುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದು ನಮಾಝ್ ನಿರ್ವಹಿಸುವುದಕ್ಕೂ ಸ್ಥಳಾವಕಾಶ ನೀಡಲಾಗುವುದು ಎಂದಿದ್ದಾರೆ. …

Read More »

ಪಾಕಿಸ್ತಾನ ಸರಕಾರದಿಂದ ಬಾಬ ಗುರು ನಾನಕ್ ವಿಜ್ಞಾನ ಕಾಲೇಜು

ಲಾಹೋರ್, ನ.18: ಖೈಬರ್-ಫಕ್ತೂನ್ವಾದಲ್ಲಿ ಸಿಖ್ಖರಿಗಾಗಿ ಪ್ರಥಮ ಬಾಬಾ ಗುರು ನಾನಕ್ ಸ್ಕೂಲ್ ಆಫ್ ಸೈನ್ಸ್ ಟೆಕ್ನಾಲಜಿ, ಇಂಜಿನಿಯರಿಂಗ್, ಆರ್ಟ್ ಆಂಡ್ ಮ್ಯಾಥಮೆಟಿಕ್ಸ್ ಕಾಲೇಜನ್ನು ಪಾಕಿಸ್ತಾನ ಸರಕಾರ ತೆರೆದಿದೆ. ಪೇಶಾವರದಲ್ಲಿ ಇಂತಹದೇ ಶಾಲೆಯಲ್ಲಿ ಸೋಮವಾರದಿಂದ ಪಾಠ ಆರಂಭವಾಗಲಿದೆ. ವಿಭಜನೆಯ 72 ವರ್ಷದ ನಂತರ ಪಾಕಿಸ್ತಾನ ಸರಕಾರ ಅಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಹೊಸ ಪೀಳಿಗೆಗಾಗಿ ವಿಜ್ಞಾನ, ತಂತ್ರಜ್ಞಾನ ಶಿಕ್ಷಣದ ಕೊಡುಗೆ ನೀಡುತ್ತಿದೆ. ಶ್ರೀ ಗುರುನಾನಕ್ ದೇವ್‍ಜಿ ಅವರ 550ನೇ ಜನ್ಮ ವರ್ಷದಲ್ಲಿ ಈ …

Read More »

ಬಾಬರಿ ಪ್ರಕರಣ: ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಮುಸ್ಲಿಂ ಪರ್ಸನಲ್ ಲಾ ಬೋರ್ಡು ನಿರ್ಧಾರ

ಹೊಸದಿಲ್ಲಿ,ನ.17: ಅಯೋಧ್ಯೆಯ ವಿವಾದಿತ ತೀರ್ಪು ವಿರುದ್ಧ ಮುಸ್ಲಿಮರು ರಿವ್ಯೂ ಅರ್ಜಿ ದಾಖಲಿಸಲು ನಿರ್ಧರಿಸಿದ್ದು ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡು ಪ್ರಧಾನ ಕಾರ್ಯದರ್ಶಿ ಜಾಫರ್‍ಯಾಬ್ ಜೀಲಾನಿ ಅಯೋಧ್ಯೆಯ ಸುಪ್ರೀಂ ಕೋರ್ಟು ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಮಸೀದಿಯ ಬದಲಾಗಿ ಐದು ಎಕರೆ ಪಡೆಯುವ ವಿಚಾರ ನಮಗೆ ಒಪ್ಪಿಗೆಯಲ್ಲ. ನಾವು ಬೇರೆ ಜಮೀನಿಗಾಗಿ ನ್ಯಾಯಾಲಕ್ಕೆ ಹೋಗಿಲ್ಲ. ಬಾಬರಿ ಮಸೀದಿ ಇದ್ದಲ್ಲೇ ನಮಗೆ ಜಮೀನು ಬೇಕಿದೆ …

Read More »

ರಾಜ್ಯ ನಿಧಿಯಿಂದ ಮದ್ರಸಕ್ಕೆ 188 ಲಕ್ಷ ರೂ. ನೆರವು: ಮಧ್ಯ ಪ್ರದೇಶ ಸರಕಾರ ನಿರ್ಧಾರ

ಇಂದೋರ್, ನ.14: ಮದ್ರಸಾಗಳಿಗೆ ಕೊಡುತ್ತಿದ್ದ ಶಾಲೆಯ ಸೌಲಭ್ಯ ಅನುದಾನ ಈ ವರ್ಷದಿಂದ ಸಿಗದಿರುವ ಹಿನ್ನೆಲೆಯಲ್ಲಿ ಮದ್ರಸಾಗಳಿಗೆ ಮಧ್ಯ ಪ್ರದೇಶ ಸರಕಾರ ರಾಜ್ಯ ನಿಧಿಯಿಂದ 188 ಲಕ್ಷ ರೂ. ಸಹಾಯ ಧನ ಮಂಜೂರು ಮಾಡಿದೆ. ಮಧ್ಯ ಪ್ರದೇಶದ ಗೆಹ್ಲೋಟ್ ಸರಕಾರದ ನಿರ್ಧಾರದಿಂದಾಗಿ ಮದ್ರಸಾಗಳ ನಿರ್ವಹಣೆಯು ಸಂಕಟದಿಂದ ಮುಕ್ತವಾಗಲಿದೆ. ಇಲ್ಲಿ ಕಲಿಯುವ ಮಕ್ಕಳಿಗೆ ಶಿಕ್ಷಣ ಮತ್ತು ಅಗತ್ಯ ಸೌಲಭ್ಯ ಲಭ್ಯಗೊಳಿಸುವುದಕ್ಕೆ ಸಹಾಯಕವಾಗಿದೆ. ಕೇಂದ್ರ ಸರಕಾರ ರಾಜಸ್ಥಾನದ ಶಾಲಾ ಶಿಕ್ಷಣ ಪರಿಷತ್‍ ಮೂಲಕ ಮದ್ರಸಾ …

Read More »

ಹಲವು ವರ್ಷಗಳಿಂದ ಮುಚ್ಚಿಟ್ಟಿದ್ದ ಹಿಂದೂ ಮಂದಿರವನ್ನು ಪುನಃ ತೆರೆಯಲಿರುವ ಪಾಕಿಸ್ತಾನ

ಇಸ್ಲಾಮಾಬಾದ್, ನ. 14: ಪಾಕಿಸ್ತಾನ ಸರಕಾರ ದೇಶದಲ್ಲಿ ಮುಚ್ಚಿರುವ ಹಿಂದೂ ಮಂದಿರಗಳನ್ನು ನವೀಕರಿಸಿ ತೆರೆಯಲು ನಿರ್ಧರಿಸಿದೆ. ಪಾಕಿಸ್ತಾನದ ಹಿಂದೂ ಸಮುದಾಯ ಬಹಳ ಹಿಂದಿನಿಂದಲೂ ಮುಂದಿಟ್ಟ ಬೇಡಿಕೆಯಿಗ ನನಸಾಗುತ್ತಿದೆ. ರೇಡಿಯೊ ಪಾಕಿಸ್ತಾನದ ವರದಿಯ ಪ್ರಕಾರ ಇಮ್ರಾನ್ ಖಾನ್‍ರ ಸರಕಾರ ಮಂದಿರ ತೆರೆದುಕೊಡಲು ನಿರ್ಧರಿಸಿದೆ. ಪಾಕಿಸ್ತಾನ ಸಚಿವ ಅಹಮ್ ಜವಾದ್‍ರು ಹಿಂದೂ ಸಮುದಾಯದ ಬಹಳ ಸುದೀರ್ಘ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ತಿಳಿಸಿದ್ದಾರೆ. ಸರಕಾರ ಅವರ ಬೇಡಿಕೆಯನ್ನು ಪುರಸ್ಕರಿಸಿದೆ. ಮತ್ತು ಮಂದಿರಗಳನ್ನು ತೆರೆಯಲು ನಿರ್ಧರಿಸಿದೆ …

Read More »

ಗಝಾಲ ಹಾಶ್ಮಿ ವರ್ಜಿನಿಯ ಸೆನೆಟ್ ಪ್ರತಿನಿಧಿಯಾಗಿರುವ ಮೊದಲ ಮುಸ್ಲಿಂ ಮಹಿಳೆ

ವರ್ಜೀನಿಯ,ನ.13: ವರ್ಜೀನಿಯ ಸನೆಟ್‍ನ ಇತಿಹಾಸದಲ್ಲಿಯೇ ಮುಸ್ಲಿಂ ಮಹಿಳಾ ಪ್ರತಿನಿಧಿಯೊಬ್ಬರು ಆಯ್ಕೆಯಾಗಿದ್ದಾರೆ. ಕಳೆದ ವಾರ ನಡೆದ ಚುನಾಣೆಯಲ್ಲಿ ವರ್ಜೀನಿಯ ಡಿಸ್ಟ್ರಿಕ್ಟ್ ನಿಂದ ಭಾರತದ ಮೂಲದ ಗಝಾಲ ಗೆದ್ದಿದ್ದಾರೆ. ಅವರಿಗೆ ಪ್ರಚಂಡ ಬಹುಮತ ಸಿಕ್ಕಿತ್ತು. ಡೆಮಕ್ರಾಟಿಕ್ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ತನ್ನ ಪ್ರಥಮ ಚುನಾವಣೆಯಲ್ಲಿಯೇ ಗೆಲುವು ಕಂಡಿದ್ದಾರೆ. ವರ್ಜೀನಿಯದಲ್ಲಿ ರಿಪಬ್ಲಿಕನ್ ಪಾರ್ಟಿ ನಿರೀಕ್ಷಿತ ಜಯ ಪಡೆಯಲು ವಿಫಲವಾಗಿದೆ. ರಿಚ್ಮಂಡ್ ರೆನಾಲ್ಡ್ ಕಮ್ಯುನಿಟಿ ಕಾಲೇಜಿನ ಲಿಟರೇಚರ್ ಪ್ರೊಫೆಸರ್ ಆಗಿ ಗಝಾಲ್ 20 ವರ್ಷ …

Read More »

ಸರಯೂ ನದಿ ದಡದಲ್ಲಿ ಬಾಬರಿ ಮಸೀದಿಗೆ ಸ್ಥಳ?

ಹೊಸದಿಲ್ಲಿ,ನ.11: ಬಾಬರಿ ಮಸೀದಿ ಜಮೀನು ಸಂಪೂರ್ಣ ರಾಮ ಮಂದಿರಕ್ಕೆ ಬಿಟ್ಟು ಕೊಡುವ ತೀರ್ಪನ್ನು ಸುಪ್ರೀಂಕೋರ್ಟು ನೀಡಿದ್ದು ಬದಲಿಯಾಗಿ ಮಸೀದಿಗೆ ಐದು ಎಕರೆ ಜಮೀನು ಹದಿನೈದು ಕಿಲೊಮೀಟರ್ ವ್ಯಾಪ್ತಿಯಲ್ಲಿ ನೀಡಬೇಕೆಂದು ಹೇಳಿತ್ತು. ಬಾಬರಿ ಮಸೀದಿ ಕಟ್ಟಡದ ಬಳಿ ಅಥವಾ ಹಳೆಯ ಅಯೋಧ್ಯೆ ಮುನ್ಸಿಪಲ್ ವ್ಯಾಪ್ತಿಯಲ್ಲಿ ಜಮೀನು ಕೊಡಲಾಗದು. ಸರಯೂ ನದಿಯ ಇನ್ನೊಂದು ಜನ ನಿಬಡತೆಯಿಲ್ಲದ ಪ್ರದೇಶದಲ್ಲಿ ಜಮೀನು ನೀಡುವ ತಯಾರಿ ನಡೆಯುತ್ತಿದೆ ಎಂಬ ಸೂಚನೆಯಿದೆ ಎಂದು ವರದಿಯಾಗಿದೆ. ವಿವಾದ ಸ್ಥಳದ ಪಂಚಕೋಶ …

Read More »

ಬಾಬರಿ ಮಸೀದಿ ತೀರ್ಪು: ಪ್ರಚೋದಾತ್ಮಕ ಪೋಸ್ಟ್ ಹಾಕಿದ 77 ಮಂದಿ ಬಂದನ

ಹೊಸದಿಲ್ಲಿ, ನ.11: ಗೃಹ ಸಚಿವಾಲಯದ ಮೂಲಗಳು ತಿಳಿಸಿದಂತೆ ಅಯೋಧ್ಯೆ ತೀರ್ಪಿನ ನಂತರ ಪ್ರಚೋದನಾತ್ಮಕ ಪೋಸ್ಟ್ ಹಾಕಿದ್ದಕ್ಕಾಗಿ ಮೂವತ್ತನಾಲ್ಕು ಮೊಕದ್ದಮೆ ದಾಖಲಾಗಿದೆ. 77 ಮಂದಿಯನ್ನು ಬಂಧಿಸಲಾಗಿದೆ. ರವಿವಾರ ಒಂದೇ ದಿವಸ ಇಂತಹ 22 ಮೊಕದ್ದಮೆಗಳು ದಾಖಲಾಗಿವೆ. ನಲ್ವತ್ತು ಮಂದಿಯನ್ನು ಬಂಧಿಸಲಾಯಿತು ಎಂದು ಮೂಲವು ತಿಳಿಸಿದೆ. ರವಿವಾರ ಫೇಸ್‍ಬುಕ್, ಟ್ವಿಟರ್ ಮತ್ತು ಯುಟ್ಯೂಬ್‍ನಲ್ಲಿ ಬಂದ 4563 ಪೋಸ್ಟ್ ಗಳನ್ನು ಗಮನಿಸಿ ಕ್ರಮ ಜರಗಿಸಲಾಯಿತು. ಈವರೆಗೆ ಇಂತಹ 8275 ಪೋಸ್ಟ್ ಗಳ ವಿರುದ್ಧ ಕ್ರಮ …

Read More »

ಭಾರತದ ಮುಸ್ಲಿಮರಿಗೆ ಮಸೀದಿ ಬೇಡ, ಶಾಲೆ ಬೇಕು – ಸಲೀಂ ಖಾನ್

ಮುಂಬೈ, ನ.11: ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿಗೆ ಪ್ರತಿಕ್ರಿಯಿಸಿದ ಬಾಲಿವುಡ್ ಸಾಹಿತಿ ಸಲೀಂ ಖಾನ್ ಮುಸ್ಲಿಮರಿಗೆ ಮಸೀದಿಗಿಂತಲೂ ಶಾಲೆಗಳ ಅಗತ್ಯವಿದೆ ಎಂದು ವಿಶ್ಲೇಷಿಸಿದ್ದಾರೆ. ಪ್ರವಾದಿ ಇಸ್ಲಾಮಿನ ಎರಡು ಸೌಂದಯರ್ವನ್ನು ತಿಳಿಸಿದರು. ಪ್ರೀತಿ, ಕ್ಷಮೆ ಸೇರಿದೆ. ಈ ಕತೆ ಅಯೋಧ್ಯೆಯಲ್ಲಿಗೆ ಮುಗಿಯಲಿ, ಮುಸ್ಲಿಮರು ತಮ್ಮ ಈ ಎರಡು ವಿಶೇಷತೆಗಳೊಂದಿಗೆ ಮುಂದೆ ಸಾಗಬೇಕು ಎಂದು ಹೇಳಿದರು. ಪ್ರೀತಿ ವ್ಯಕ್ತಪಡಿಸಿರಿ ಕ್ಷಮಿಸಿರಿ ಇನ್ನುಮುಂದೆ ಈ ವಿಷಯವನ್ನು ಕೆದಕಬೇಡಿ. ಮುಂದೆ ಸಾಗಿರಿ ಎಂದು …

Read More »