Home / ವಾರ್ತೆಗಳು (page 34)

ವಾರ್ತೆಗಳು

ಕುರ್‍ಆನ್ ಫಾರ್ ಆಂಡ್ರಾಯಿಡ್

ವಿಕೆ ಅಬ್ದು ಆಂಡ್ರಾಯಿಡ್ ಫೋನ್ ಉಪಯೋಗಿಸುವವರಿಗೆ ಈಗ ಪ್ಲೇ ಸ್ಟೋರಿನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಈಗ ಇಪ್ಪತ್ತೆಂಟು ಲಕ್ಷ ಆಪ್‍ಗಳು ಲಭ್ಯವಿದ್ದು ಇದರಲ್ಲಿ ಪವಿತ್ರ ಕುರ್‍ಆನ್‍ಗೆ ಸಂಬಂಧಿಸಿದ ನೂರಾರು ಆಪ್‍ಗಳೂ ಸೇರಿವೆ. ಹೆಚ್ಚು ಜನಪ್ರಿಯ ಮತ್ತು ಜನಪ್ರಿಯವಲ್ಲದ್ದೂ ಇವೆ. ಪ್ರತಿಯೊಂದು ಆಪ್‍ನಲ್ಲಿ ಬೇರೆ ಬೇರೆ ರೀತಿಯ ಕಾರ್ಯ, ಮತ್ತು ಗುರಿಯಿರಬಹುದು. ಆದರೆ ಜಗತ್ತಿನಾದ್ಯಂತ ವಿವಿಧ ಭಾಷೆಗಳ ಪವಿತ್ರ ಕುರ್‍ಆನ್ ಅನುವಾದ ವ್ಯಾಖ್ಯಾನಗಳನ್ನು ಆಪ್ ಮೂಲಕ ನೋಡುವ ಸೌಕರ್ಯ ದೊರೆಯುತ್ತಿದೆ. ಇವುಗಳಲ್ಲಿ …

Read More »

ಬಹ್ರೈನ್ ಶೃಂಗದಲ್ಲಿ ಇಸ್ರೇಲ್ ಪ್ರಾತಿನಿದ್ಯ ವಿರೋಧಿಸಿದ ಹಮಾಸ್

ಮನಾಮ, ಅ.21: ಬಹ್ರೈನ್‍ನಲ್ಲಿ ನಡೆಯುವ ಸಮುದ್ರ ತೀರದ ಸುರಕ್ಷಿತತೆಗೆ ಸಂಬಂಧಿಸಿದ ಶೃಂಗದಲ್ಲಿ ಇಸ್ರೇಲಿನ ಪ್ರಾತಿನಿಧ್ಯವನ್ನು ಹಮಾಸ್ ವಿರೋಧಿಸಿದೆ. ಸೋಮವಾರ ಅಮೆರಿಕದ ನೇತೃತ್ವದಲ್ಲಿ ಹಡಗು ಮೇಲೆ ದಾಳಿಯ ಬೆದರಿಕೆಯ ಕುರಿತು ಚರ್ಚಿಸಲು ಶೃಂಗ ಸಮ್ಮೇಳನ ನಡೆಯುತ್ತಿದೆ. ಶೃಂಗದಲ್ಲಿ ಇಸ್ರೇಲ್ ಭಾಗವಹಿಸುವುದನ್ನು ಹಮಾಸ್ ಖಂಡಿಸಿದೆ. ಇದು ವಲಯದ ಸುರಕ್ಷೆ ಮತ್ತು ಇಸ್ರೇಲಿನ ಅತಿಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ವೈಫಲ್ಯವಾಗಿದೆ ಎಂದು ಹಮಾಸ್ ವಕ್ತಾರ ಹಸೀಂ ಖಾಸಿಂ ಹೇಳಿದರು. ಈ ರೀತಿ ಇಸ್ರೇಲಿನೊಂದಿಗಿನ ಸಂಬಂಧವನ್ನು ಎಲ್ಲರೂ …

Read More »

ಆಂಧ್ರ ಸರಕಾರದಿಂದ ಇಮಾಮರಿಗೆ ಮನೆ ಕಟ್ಟಲು ಸ್ಥಳ ನೀಡುವ ಯೋಜನೆ

ವಿಜಯವಾಡ, ಅ.21: ಸ್ವಂತ ಮನೆ, ಹಾಗೂ ಜಮೀನಿಲ್ಲದ, ಬಡತನ ರೇಖೆಗಿಂತ ಕೆಳಗಿರುವ ಮಸೀದಿ ಇಮಾಮರಿಗೆ ಸ್ಥಳವನ್ನು ಒದಗಿಸುವ ಯೋಜನೆಯನ್ನು ಆಂಧ್ರ ಸರಕಾರ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ. ಆಂಧ್ರ ಪ್ರದೇಶ ವಕ್ಫ್ ಬೋರ್ಡಿನ ಅಧೀನದಲ್ಲಿ ಯೋಜನೆಗೆ ರೂಪು ನೀಡಲಾಗಿದ್ದು ಅರ್ಹ ಫಲಾನುಭವಿಗಳು ಸಂಬಂಧಿಸಿದ ವಾರ್ಡ್ ಮೆಂಬರ್ ಅಥವಾ ಪಂಚಾಯತ್‍ನಿಂದ ದೃಢೀಕರಣ ಪತ್ರ ಪಡೆದು ಅದರೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಆಂಧ್ರ ವಕ್ಫ್ ಬೋರ್ಡು ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಸಯ್ಯಿದ್ ಶಬ್ಬೀರ್ ಭಾಷ …

Read More »

ಮಂಗಳೂರು: ಬಂದರ್ ನ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಗೆ ಬೆಂಕಿ; ಸ್ಥಳೀಯ ಮುಸ್ಲಿಂ ಯುವಕರಿಂದಾಗಿ ತಪ್ಪಿದ ಭಾರೀ ಅನಾಹುತ

ಮಂಗಳೂರು: ಸೆ. 17- ಇಲ್ಲಿನ ಬಂದರ್ ನ ಬೀಬಿ ಅಲಾಬಿ ರಸ್ತೆಯಲ್ಲಿರುವ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಗೆ ಬುಧವಾರ ರಾತ್ರಿ 10ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯ ಮುಸ್ಲಿಂ ಯುವಕರು ತಕ್ಷಣ ಧಾವಿಸಿ ಬಂದು ಕಾರ್ಯಪ್ರವೃತ್ತರಾದುದರಿಂದ ಭಾರೀ ಜೀವ ಹಾನಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಸನ್ಮಾರ್ಗ ಪತ್ರಿಕೆ ಕಛೇರಿಯಿರುವ ಹಿದಾಯತ್ ಸೆಂಟರ್ ನ ಪಕ್ಕದ ಕಟ್ಟಡವಾದ M.M. ಕಾಂಪ್ಲೆಕ್ಸ್ ನಲ್ಲಿ ಕೆ ಸಿ ಸುರೇಶ್ ಅವರು …

Read More »

ಕೊಡಗು ಸಿದ್ದಾಪುರ ಮಹಾ ಪ್ರಳಯದಿಂದ ಪರೋಕ್ಷವಾಗಿ ತತ್ತರಿಸಿದ ಕೂಲಿ ಕಾಮಿ೯ಕರಿಗೆ HRS ವತಿಯಿಂದ ಬಟ್ಟೆ ಹಾಗೂ ಪಾತ್ರೆಗಳ ಉಚಿತ ಮಹಾ ಸಂತೆ

ಸಿದ್ದಾಪುರ: ಇತ್ತೀಚೆಗೆ ಸಂಭವಿಸಿದ ಮಹಾ ಪ್ರಳಯದಿಂದ ಸಂತ್ರಸ್ತರಾದ ಜನರಿಗೆ HRS ವತಿಯಿಂದ ಜಾತಿ ಮತ ಭೇದವಿಲ್ಲದೇ ಹತ್ತು ಹಲವು ಸಹಾಯ ಸಹಕಾರಗಳನ್ನು ನೀಡಿ ಸಮಾಜ ಸೇವಾ ಕಾಯ೯ಗಳಲ್ಲಿ ಮಾದರಿಯಾಗಿರುವ ಸಂಸ್ಥೆ ಈ ಹಿಂದೆ ಸಂತ್ರಸ್ತರಿಗಾಗಿ ಸಿದ್ದಾಪುರದ ಹಿರಾ ಮಸೀದಿಯ ಕೆಳ ಅಂತಸ್ತಿನಲ್ಲಿ ಸೂಪರ್ ಮಾಕೆ೯ಟನ್ನು ತೆರೆದು ಅಗತ್ಯ ವಸ್ತುಗಳನ್ನು ವಿತರಿಸಲಾಗಿತ್ತು. ಅದೇ ರೀತಿ ಪ್ರಳಯದಿಂದ ಪರೋಕ್ಷವಾಗಿ ನೊಂದ ಬಡ ಕೂಲಿ ಕಾಮಿ೯ಕರಿಗಾಗಿ ಉಡುಪುಗಳ ಉಚಿತ ಸಂತೆಯನ್ನು ವಾರದ ಹಿಂದೆ ನಡೆಸಲಾಗಿತ್ತು. …

Read More »

ಎ.ಕೆ. ಕುಕ್ಕಿಲರವರ ‘ಎಣ್ಣೆ ಬತ್ತಿದ ಲಾಟೀನು’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2017ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಬರಹಗಾರ, ಪತ್ರಕರ್ತ ಎ.ಕೆ. ಕುಕ್ಕಿಲರವರ ‘ಎಣ್ಣೆ ಬತ್ತಿದ ಲಾಟೀನು’ (ಪ್ರವಾಸ ಕಥನ) ಕೃತಿ ಆಯ್ಕೆಯಾಗಿದೆ. ಸುಮಾರು 20 ವರ್ಷಗಳ ಹಿಂದೆ ‘ಸನ್ಮಾರ್ಗ’ ಕನ್ನಡ ವಾರಪತ್ರಿಕೆಯ ಸಂಪಾದಕೀಯ ಬಳಗಕ್ಕೆ ಸೇರ್ಪಡೆಗೊಂಡು, ಕಳೆದ 10 ವರ್ಷಗಳಿಂದ ‘ಸನ್ಮಾರ್ಗ’ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಎ.ಕೆ. ಕುಕ್ಕಿಲರವರು …

Read More »

ಕಡು ಬಡತನದಲ್ಲಿ ಬೆಳೆದ ಇಥಿಯೋಪಿಯಾ ಪ್ರಧಾನಿಗೆ ನೊಬೆಲ್ ಶಾಂತಿ ಪ್ರಶಸ್ತಿ

ನಾರ್ವೆ: ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್‌ಗೆ 2019ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಅಂತಾರಾಷ್ಟ್ರೀಯ ಸಹಕಾರ ಮತ್ತು ಶಾಂತಿ ಸ್ಥಾಪನೆಗಾಗಿ ಪರಿಶ್ರಮಿಸಿದ ಹಾಗೂ ನೆರೆಯ ಎರಿಟ್ರಿಯಾ ಜೊತೆಗಿನ ಗಡಿ ಸಂಘರ್ಷವನ್ನು ಪರಿಹರಿಸಿದ ವಿಶೇಷ ಸಾಧನೆಗಾಗಿ ಅವರಿಗೆ ಈ ಮನ್ನಣೆ ದೊರೆತಿದೆ. ಮುಸ್ಲಿಂ ತಂದೆ ಮತ್ತು ಕ್ರಿಶ್ಚಿಯನ್ ತಾಯಿಗೆ ಜನಿಸಿ ವಿದ್ಯುತ್ ಮತ್ತು ನೀರಿನ ಸೌಲಭ್ಯವೂ ಇಲ್ಲದ ಗುಡಿಸಿಲಿನಲ್ಲಿ ಬೆಳೆದು ಕಡು ಬಡತನದಲ್ಲೇ ಬಾಲ್ಯ ಯೌವ್ವನಗಳನ್ನು ಸವೆಸಿದ 42ನೇ …

Read More »

ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್ ಪ್ರಭಾವ: ಇಸ್ಲಾಮ್ ಸ್ವೀಕರಿಸಿದ ಇಸ್ಲಾಮ್ ದ್ವೇಷಿ

ಒಂದು ಕಾಲದಲ್ಲಿ ಇಸ್ಲಾಮ್ ದ್ವೇಷಿಯಾಗಿದ್ದ ಇಂಗ್ಲೆಂಡ್ ಪ್ರಜೆ, ನಾಟಿಂಗ್‍ ಹ್ಯಾಮ್ ಫಾರೆಸ್ಟ್ ಫುಟ್ಬಾಲ್ ತಂಡದ ಆಟಗಾರ ಬೆನ್ ಬರ್ಡ್, ತಾನು ಈಜಿಪ್ಟ್ ದೇಶದ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್ ಅವರಿಂದ ಪ್ರೇರಿತನಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದಾಗಿ ಹೇಳಿದ್ದಾರೆ. “ನಾನು ಇಸ್ಲಾಮ್ ಧರ್ಮಕ್ಕೆ ನಿಷ್ಠನಾಗಿರುವುದಾಗಿ ಹೇಳಿಕೊಂಡರೂ ನಾನು ನಾನಾಗಿಯೇ ಇರಬಲ್ಲೆ, ಇದು ನಾನು ಮುಹಮ್ಮದ್ ಸಲಾಹ್ ಅವರಿಂದ ಕಲಿತೆ. ಕೇವಲ ಅವರ ಕೈಕುಲುಕಲು ಹಾಗೂ ‘ಚಿಯರ್ಸ್’ ಅಥವಾ ‘ಶುಕ್ರಾನ್’ ಎಂದು ಹೇಳಲು …

Read More »

ಜಮಾಅತ್ ನಿಯೋಗದಿಂದ ಸುತ್ತೂರು ಶ್ರೀಗಳ ಭೇಟಿ

ಗೌರವಾನ್ವಿತ ಸ್ವಾಮೀಜಿಯವರಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸುತ್ತೂರು ಮಠ ಇವರನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿಯವರಾದ ಜನಾಬ್ ಮುಹಮ್ಮದ್ ಕುಂಞಯವರ ನೇತೃತ್ವದಲ್ಲಿ ಜಮಾಅತ್ ನಿಯೋಗ ಭೇಟಿ ಮಾಡಿತು. ಈ ಸಂದರ್ಭದಲ್ಲಿ ಪ್ರಸಕ್ತ ಪರಿಸ್ಥಿತಿ ಮತ್ತು ಸ್ಥಿತಿಗತಿಗಳ ಬಗ್ಗೆ ಸ್ವಾಮೀಜಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಪ್ರಸಕ್ತ ಪರಿಸ್ಥಿತಿಯಲ್ಲಿ ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಬಹಳ ಅರ್ಥಪೂರ್ಣ ವಿಚಾರ ವಿನಿಮಯ ನಡೆಯಿತು. ಜಮಾಅತ್ ಚಟುವಟಿಕೆಗಳು ಬಗ್ಗೆ ವಿಶೇಷವಾಗಿ …

Read More »

ಪರಸ್ಪರರನ್ನು ಅರಿಯೋಣ ಸೌಹಾರ್ದ ಸಮಾಜ ಕಟ್ಟೋಣ – ಮಸೀದಿ ಸಂದರ್ಶನ ಕಾರ್ಯಕ್ರಮ

ಮೈಸೂರು: ಮೈಸೂರು ನಗರದ ಮಸ್ಜಿದ್ ಮುರಾದ್ ಶಾ ಸಿಎಫ್ಟಿಆರ್ ನಲ್ಲಿ ಇತ್ತೀಚೆಗೆ ಮಸೀದಿ ದರ್ಶನ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ನೂರಾರು ದೇಶ ಭಾಂಧವರು ಮಸೀದಿ ಸಂದರ್ಶನ ನಡೆಸಿದರು. ಈ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ, ನಮಾಝ್, ಆಝಾನ್, ಹಾಗೂ ಇನ್ನಿತರ ಪ್ರಮುಖ ವಿಷಯಗಳ ಕುರಿತು ಮಾಹಿತಿ ನೀಡಿದರು.

Read More »