Home / ವಾರ್ತೆಗಳು / ಭ್ರಷ್ಟಾಚಾರ: ಸೌದಿ ಅರೇಬಿಯದಲ್ಲಿ ನೂರಾರು ಸರಕಾರಿ ನೌಕರರ ಬಂಧನ

ಭ್ರಷ್ಟಾಚಾರ: ಸೌದಿ ಅರೇಬಿಯದಲ್ಲಿ ನೂರಾರು ಸರಕಾರಿ ನೌಕರರ ಬಂಧನ

ರಿಯಾದ್: ಲಂಚ ಪಡೆದ ಆರೋಪ ಮತ್ತು ಸರಕಾರಿ ಕಚೇರಿಗಳನ್ನು ದುರುಪಯೋಗಿಸಿದ ಆರೋಪದಲ್ಲಿ ನೂರಾರು ಸರಕಾರಿ ಉದ್ಯೋಗಿಗಳನ್ನು ಸೌದಿ ಅರೇಬಿಯ ಬಂಧಿಸಿದೆ. ಸೈನಿಕ, ಸುರಕ್ಷಾ ಅಧಿಕಾರಿಗಳು ಕೂಡ ಬಂಧಿತರಲ್ಲಿ ಒಳಗೊಂಡಿದ್ದಾರೆ. ಈ ವಿವರವನ್ನು ರವಿವಾರ ಸೌದಿ ಅರೇಬಿಯ ಭ್ರಷ್ಟಾಚಾರ ವಿರೋಧಿ ಆಯೋಗ ತಿಳಿಸಿದೆ.

ಕಸ್ಟಡಿಯಲ್ಲಿರುವ ನೌಕರರ ವಿರುದ್ಧ ವಿವಿಧ ಪ್ರಕರಣ ಗಳನ್ನು ದಾಖಲಿಸಿಕೊಳ್ಳಲಾಗಿದ್ದು 2017ರಲ್ಲಿಯೂ ಸೌದಿ ಅರೇಬಿಯದಲ್ಲಿ ಇದಕ್ಕೆ ಸಮಾನವಾದ ಬಂಧನ ಸತ್ರ ನಡೆದಿತ್ತು. ಅಂದು ಶ್ರೀಮಂತ  ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಸೌದಿ ಸರಕಾರ ಭ್ರಷ್ಟಾಚಾರ ವಿರುದ್ಧ ಹೋರಾಟದ ಭಾಗವಾಗಿ ಈ ಬಂಧನ ಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.

SHARE THIS POST VIA

About editor

Check Also

“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ

ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ …