Home / ವಾರ್ತೆಗಳು / ಜಿಹಾದ್ ಎಂಬುದು ಮುಸ್ಲಿಮೇತರ ಸಮಾಜವನ್ನು ಸರ್ವನಾಶ ಮಾಡುವ ಆಯುಧ ಎಂಬುದು ಅತ್ಯಂತ ದೊಡ್ಡ ಸುಳ್ಳು: ಜಮಾಅತೆ ಇಸ್ಲಾಮೀ ಹಿಂದ್

ಜಿಹಾದ್ ಎಂಬುದು ಮುಸ್ಲಿಮೇತರ ಸಮಾಜವನ್ನು ಸರ್ವನಾಶ ಮಾಡುವ ಆಯುಧ ಎಂಬುದು ಅತ್ಯಂತ ದೊಡ್ಡ ಸುಳ್ಳು: ಜಮಾಅತೆ ಇಸ್ಲಾಮೀ ಹಿಂದ್

ಇಸ್ಲಾಮೇತರ ನಂಬಿಕೆಗಳನ್ನು ಮಿಲಿಟರಿ ಬಲ ಉಪಯೋಗಿಸಿಯೋ ಅಥವಾ ಇನ್ನಾವುದಾದರೂ ದಾರಿಯ ಮೂಲಕವೋ ನಾಶ ಮಾಡುವುದಕ್ಕೆ ಇಸ್ಲಾಮ್ ಬಂದಿಲ್ಲ, ಆದರೆ ಮುಸ್ಲಿಮೇತರ ವಿದ್ವಾಂಸರು ಇಂತಹ ಸುಳ್ಳುಗಳನ್ನು ಭಾರತವೂ ಸೇರಿದಂತೆ ಜಾಗತಿಕವಾಗಿ ಹರಡಿದ್ದಾರೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಡಾಕ್ಟರ್ ಮೊಹಮ್ಮದ್ ರಝಿವುಲ್ ಇಸ್ಲಾಮ್ ನದ್ವಿ ಹೇಳಿದ್ದಾರೆ.

ವಾಕ್ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಇಸ್ಲಾಮ್, ಹೇಗೆ ಇಸ್ಲಾಮೆತರ ನಂಬಿಕೆಗಳನ್ನು ನಾಶ ಮಾಡುವುದಕ್ಕೆ ಕರೆ ಕೊಡಲು ಸಾಧ್ಯ ಎಂದವರು ಪ್ರಶ್ನಿಸಿದ್ದಾರೆ.

ದೆಹಲಿಯ ಜಮಾಆತ್ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು.

ಮುಸ್ಲಿಮ್ ಆಡಳಿತಗಾರರು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಶತಮಾನಗಳ ಕಾಲ ಆಡಳಿತ ನಡೆಸಿದ್ದರು. ಅವರೆಂದು ಕೂಡ ಆಯಾ ರಾಷ್ಟ್ರಗಳಲ್ಲಿ ಮುಸ್ಲಿಮೇತರರನ್ನು ನಾಶ ಮಾಡಲು ಪ್ರಯತ್ನಿಸಿಲ್ಲ. ಭಾರತವು ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಮುಸ್ಲಿಮೇತರರು ಮುಸ್ಲಿಮ್ ಆಡಳಿತಗಾರರೊಂದಿಗೆ ಜೊತೆಯಾಗಿ ಆಡಳಿತ ನಡೆಸಿದ್ದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಜಿಹಾದ್ ಎಂಬುದು ಮುಸ್ಲಿಮೇತರ ಸಮಾಜವನ್ನು ಸರ್ವನಾಶ ಮಾಡುವ ಆಯುಧ ಎಂಬುದು ಅತ್ಯಂತ ದೊಡ್ಡ ಸುಳ್ಳಾರೋಪವಾಗಿದೆ ಎಂದವರು ವಿವರಿಸಿದ್ದಾರೆ.

ಜಿಹಾದ್ ಎಂಬುದು ಮುಸ್ಲಿಮೇತರರನ್ನು ನಾಶ ಮಾಡುವುದರ ಹೆಸರಲ್ಲ, ಬದಲು ದುರ್ಬಲರು ಮರ್ದಿತರು ಮತ್ತು ಸಂಕಷ್ಟದಲ್ಲಿರುವ ಎಲ್ಲರಿಗೂ ನ್ಯಾಯ ಒದಗಿಸುವುದರ ಹೆಸರಾಗಿದೆ ಎಂದವರು ಹೇಳಿದ್ದಾರೆ.

SHARE THIS POST VIA

About editor

Check Also

ಭಾರತದಲ್ಲಿ ಅರಬಿ ಬಾಷಾ ಮಾಸಾಚರಣೆ ನಡೆಸಲು ಸೌದಿ ಅರೇಬಿಯಾ ಸಿದ್ದತೆ

ರಿಯಾದ್ : ಜುಲೈ 1ರಿಂದ 23ರ ತನಕ ದೆಹಲಿ ಮತ್ತು ಕೇರಳದಲ್ಲಿ ಕಿಂಗ್ ಸಲ್ಮಾನ್ ಇಂಟರ್ ನ್ಯಾಶನಲ್ ಅರೆಬಿಕ್ ಅಕಾಡೆಮಿಯು …