Home / ವಾರ್ತೆಗಳು / ‘ರಮಝಾನ್’ ವಿಶೇಷ ಕೊಡುಗೆ ಘೋಷಿಸಿದ ಕತರ್: ದಿನಕ್ಕೆ ಆರು ಗಂಟೆಯಷ್ಟೇ ದುಡಿಮೆಗೆ ಆದೇಶ

‘ರಮಝಾನ್’ ವಿಶೇಷ ಕೊಡುಗೆ ಘೋಷಿಸಿದ ಕತರ್: ದಿನಕ್ಕೆ ಆರು ಗಂಟೆಯಷ್ಟೇ ದುಡಿಮೆಗೆ ಆದೇಶ

ಉಪವಾಸ ತಿಂಗಳಾದ ರಮಝಾನ್ ನಲ್ಲಿ ಪ್ರತಿದಿನ ಆರು ಗಂಟೆಗಳು ಮಾತ್ರ ಕೆಲಸ ಮಾಡಬೇಕು ಎಂದು ಕತಾರ್ ಆದೇಶಿಸಿದೆ. ವಾರದಲ್ಲಿ 36 ಗಂಟೆಗಿಂತ ಅಧಿಕ ಯಾರೂ ಕೆಲಸ ಮಾಡಬಾರದು ಎಂದು ಕೂಡ ಅದು ಹೇಳಿದೆ.. ಈ ಮೂಲಕ ಉಪವಾಸ ನಿರತ ಶ್ರದ್ದಾಳುಗಳ ಪ್ರಶಂಸೆಗೆ ಪಾತ್ರವಾಗಿದೆ.

ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ರಮಝಾನಿನಲ್ಲಿ ಉದ್ಯೋಗ ಸಮಯ 5 ಗಂಟೆಯಾಗಿರಲಿದೆ ಎಂದು ಆರಂಭದಲ್ಲಿ ಕತರ್ ಘೋಷಿಸಿತ್ತು. ಆದರೆ ಆ ಬಳಿಕ ಇದನ್ನು ಆರು ಗಂಟೆ ಮೀರಬಾರದು ಎಂದು ತಿದ್ದುಪಡಿ ಮಾಡಿದೆ ಮತ್ತು ವಾರದಲ್ಲಿ 36 ಗಂಟೆಗಳಿಗಿಂತ ಅಧಿಕ ಸಮಯ ಯಾರನ್ನೂ ದುಡಿಸಬಾರದು ಎಂದು ಕೂಡ ಅದು ಆದೇಶಿಸಿದೆ.

ಕತಾರ್ ಸೆಂಟ್ರಲ್ ಬ್ಯಾಂಕ್ ದೇಶದಲ್ಲಿ ಹಣಕಾಸು ಸಂಸ್ಥೆಗಳ ಕೆಲಸದ ಸಮಯವನ್ನು ಪ್ರಕಟಿಸಿದೆ. ಬ್ಯಾಂಕ್‌ಗಳು ಬೆಳಗ್ಗೆ ಒಂಬತ್ತರಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ತೆರೆದಿರುತ್ತವೆ. ಆರೋಗ್ಯ ವಲಯದಲ್ಲಿ, ಹಮದ್ ವೈದ್ಯಕೀಯ ನಿಗಮವು 24-ಗಂಟೆಗಳ ತುರ್ತು ವಿಭಾಗ, ಆಂಬ್ಯುಲೆನ್ಸ್ ಮತ್ತು ಮಕ್ಕಳ ತುರ್ತು ಕೇಂದ್ರಗಳು ಕಾರ್ಯನಿರ್ವಹಿಸಲಿದೆ.

ಭಾನುವಾರದಿಂದ ಗುರುವಾರದವರೆಗೆ HMC ಚಿಕಿತ್ಸಾಲಯಗಳಲ್ಲಿ ಹೊರರೋಗಿಗಳ ಸೇವೆಗಳು ಲಭ್ಯವಿರುವುದು. ಎರಡು ಪಾಳಿಯಲ್ಲಿ ವೈದ್ಯರು ಸೇವೆ ಸಲ್ಲಿಸಲಿದ್ದು, ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ರಾತ್ರಿ 8 ರಿಂದ ರಾತ್ರಿ 10 ರವರೆಗೆ ಲಭ್ಯವಿರುತ್ತಾರೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …