Home / ವಾರ್ತೆಗಳು / ಉಪವಾಸನಿರತ ಗಾಝಾ ನಿವಾಸಿಗಳ ಹಸಿವಿನ ಸಂಕಷ್ಟವನ್ನು ಅಪಹಾಸ್ಯದ ವ್ಯಂಗ್ಯಚಿತ್ರವಾಗಿಸಿದ ಫ್ರೆಂಚ್ ಪತ್ರಿಕೆ

ಉಪವಾಸನಿರತ ಗಾಝಾ ನಿವಾಸಿಗಳ ಹಸಿವಿನ ಸಂಕಷ್ಟವನ್ನು ಅಪಹಾಸ್ಯದ ವ್ಯಂಗ್ಯಚಿತ್ರವಾಗಿಸಿದ ಫ್ರೆಂಚ್ ಪತ್ರಿಕೆ

ರಮಝಾನಿನಲ್ಲಿ ಆಹಾರ ಇಲ್ಲದೆ ಕಷ್ಟ ಪಡುತ್ತಿರುವ ಗಾಝಾದ ಜನರ ಬಗ್ಗೆ ಫ್ರೆಂಚ್ ಪತ್ರಿಕೆ ಲಿಬರೇಷನ್ ಅಪಹಾಸ್ಯದ ಕಾರ್ಟೂನ್ ಪ್ರಕಟಿಸಿದೆ.

ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯಗಳ ಬಗ್ಗೆ ಕಣ್ಣು ಮುಚ್ಚಿದಂತೆ ನಟಿಸಿರುವ ಈ ಪತ್ರಿಕೆಯು ಜನರ ಸಂಕಷ್ಟವನ್ನು ಅಪಹಾಸ್ಯದ ಕಾರ್ಟೂನ್ ಗೆ ಬಳಸಿಕೊಂಡಿದೆ.

ಗಾಝಾದಲ್ಲಿ ರಮ್ಜಾನ್: ಉಪವಾಸ ತಿಂಗಳ ಆರಂಭ… ಎಂಬ ಶೀರ್ಷಿಕೆಯಲ್ಲಿ ಈ ಕಾರ್ಟೂನ್ ರಚಿಸಲಾಗಿದೆ. ಕೋಕೋ ಎಂದೇ ಗುರುತಿಸಿಕೊಂಡಿರುವ ಫ್ರೆಂಚ್ ಕಾರ್ಟೂನಿಷ್ಟ್ ಕೋರಿನ್ ರಾಯ್ ಇದರ ಹಿಂದಿದ್ದಾರೆ ಎಂದು ತಿಳಿದು ಬಂದಿದೆ.

ಧ್ವಂಸಗೊಂಡ ಗಾಝಾದಲ್ಲಿ ಇಲಿಯೊಂದನ್ನು ಹಿಡಿಯಲು ಬಾಲಕ ಓಡುವುದು ಮತ್ತು ಈಗಲ್ಲ ಉಪವಾಸ ತೊರೆದ ಬಳಿಕ ಹಿಡಿ ಅಂತ ತಾಯಿ ಆತನನ್ನು ತಡೆಯುವುದು ಈ ಕಾರ್ಟೂನ್ ನಲ್ಲಿ ತೋರಿಸಲಾಗಿದೆ.

ಜನಾಂಗ ಹತ್ಯೆಗೆ ಗುರಿಯಾಗಿರುವ ಒಂದು ಸಮುದಾಯವನ್ನು ಹೀಗೆ ಕಾರ್ಟೂನ್ ಮೂಲಕ ಅವಮಾನಿಸಿರುವುದರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವಿರೋಧ ವ್ಯಕ್ತವಾಗಿದೆ. ಈ ನಡುವೆ ಈ ಕಾರ್ಟೂನ್ ಗೆ ಪತ್ರಿಕೆ ಕ್ಷಮೆ ಯಾಚಿಸಿದೆ ಎಂಬ ವರದಿಯೂ ಬಂದಿದೆ.

SHARE THIS POST VIA

About editor

Check Also

ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ

ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ …