Home / ವಾರ್ತೆಗಳು / ‘ರಮಝಾನ್’ ಮಕ್ಕಾ-ಮದೀನದಲ್ಲಿ ಹೆಚ್ಚಿದ ಜನಸಂದಣಿ: ಮಸ್ಜಿದುಲ್ ಹರಂ ಬರುವವರಿಗೆ ಮಾಸ್ಕ್ ಕಡ್ಡಾಯ

‘ರಮಝಾನ್’ ಮಕ್ಕಾ-ಮದೀನದಲ್ಲಿ ಹೆಚ್ಚಿದ ಜನಸಂದಣಿ: ಮಸ್ಜಿದುಲ್ ಹರಂ ಬರುವವರಿಗೆ ಮಾಸ್ಕ್ ಕಡ್ಡಾಯ

ರಮಝಾನಿನಲ್ಲಿ ಮಕ್ಕಾ ಮತ್ತು ಮದೀನಕ್ಕೆ ಬರುವವರು ಮಾಸ್ಕ್ ಧರಿಸಬೇಕು ಎಂದು ಸೌದಿ ಸರಕಾರ ಆದೇಶಿಸಿದೆ. ಮಕ್ಕಾದ ಮಸ್ಜಿದುಲ್ ಹರಾಂಗೆ ಜನ ಸಾಗರವೇ ಹರಿದು ಬರುತ್ತಿದೆ. ಜನರನ್ನು ನಿಯಂತ್ರಿಸುವುದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ರಮಝಾನಿನ ಹಿನ್ನೆಲೆಯಲ್ಲಿ ಮಸ್ಜಿದುಲ್ ಹರಾಂಗೆ ಬರುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹರಂಗೆ ಬರುವವರು ಮಾಸ್ಕ್ ಧರಿಸಬೇಕು ಎಂದು ಆದೇಶಿಸಲಾಗಿದೆ. ಭಾರಿ ಜನಸಂದಣಿಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಇರುವ ಕಾರಣ ಮಾಸ್ಕ್ ಧರಿಸಲು ಆದೇಶಿಸಲಾಗಿದೆ ಎಂದು ವಿವರಣೆ ನೀಡಲಾಗಿದೆ.

ಮಾತ್ರ ಅಲ್ಲ ಕಾಬಾದ ಹತ್ತಿರಕ್ಕೆ ಉಮ್ರ ಯಾತ್ರಾರ್ತಿಗಳಿಗೆ ಮಾತ್ರ ಅವಕಾಶವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ. ಹಾಗೆಯೇ ಮಸ್ಜಿದುಲ್ ಹರಾಮ್ ಗೆ ಪ್ರವೇಶಿಸುವುದಕ್ಕೂ ಮತ್ತು ಅಲ್ಲಿಂದ ಹೊರಬರುವುದಕ್ಕೂ ಬೇರೆ ಬೇರೆ ಬಾಗಿಲುಗಳನ್ನು ತೆರೆಯಲಾಗಿದೆ.. ಹರಂ ಪರಿಸರಕ್ಕೆ ಬಸ್ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿದೆ. ವಾಹನ ಪಾರ್ಕಿಗೆ ಬೇರೆಯದೇ ಆದ ವ್ಯವಸ್ಥೆಯನ್ನು ಮಾಡಲಾಗಿದೆ.

SHARE THIS POST VIA

About editor

Check Also

ಭಾರತದಲ್ಲಿ ಅರಬಿ ಬಾಷಾ ಮಾಸಾಚರಣೆ ನಡೆಸಲು ಸೌದಿ ಅರೇಬಿಯಾ ಸಿದ್ದತೆ

ರಿಯಾದ್ : ಜುಲೈ 1ರಿಂದ 23ರ ತನಕ ದೆಹಲಿ ಮತ್ತು ಕೇರಳದಲ್ಲಿ ಕಿಂಗ್ ಸಲ್ಮಾನ್ ಇಂಟರ್ ನ್ಯಾಶನಲ್ ಅರೆಬಿಕ್ ಅಕಾಡೆಮಿಯು …