Home / ವಾರ್ತೆಗಳು / ಭಾರತದಲ್ಲಿ ಅರಬಿ ಬಾಷಾ ಮಾಸಾಚರಣೆ ನಡೆಸಲು ಸೌದಿ ಅರೇಬಿಯಾ ಸಿದ್ದತೆ

ಭಾರತದಲ್ಲಿ ಅರಬಿ ಬಾಷಾ ಮಾಸಾಚರಣೆ ನಡೆಸಲು ಸೌದಿ ಅರೇಬಿಯಾ ಸಿದ್ದತೆ

ರಿಯಾದ್ : ಜುಲೈ 1ರಿಂದ 23ರ ತನಕ ದೆಹಲಿ ಮತ್ತು ಕೇರಳದಲ್ಲಿ ಕಿಂಗ್ ಸಲ್ಮಾನ್ ಇಂಟರ್ ನ್ಯಾಶನಲ್ ಅರೆಬಿಕ್ ಅಕಾಡೆಮಿಯು ಅರಬಿಕ್ ಬಾಷಾ ಮಾಸಾಚರಣೆ ನಡೆಸಲಿದೆ.

ಇದರಲ್ಲಿ ವಿವಿಧ ಕಾರ್ಯಕ್ರಮಗಳು ಜರಗಲಿವೆ. ಅರೆಬಿಕ್ ಭಾಷೆಯನ್ನು ಕಲಿಸುವ ಪಠ್ಯ ಕ್ರಮಗಳನ್ನು ಅಭಿವೃದ್ಧಿ ಪಡಿಸಲು ಅರೆಬಿಕ್ ಶಿಕ್ಷಕರ ಸಾಮರ್ಥ್ಯವನ್ನು ಉತ್ತಮಗೊಳಿಸಲು ಅನೇಕ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ಸೌದಿ ಅರೇಬಿಯಾ ಈ ಕಾರ್ಯಕ್ರಮ ಕೈಗೊಂಡಿದೆ.

ಇದು ಹ್ಯೂಮನ್ ಕೆಪೇಸಿಟಿ ಡೆವಲಪ್ಮೆಂಟ್ ಪ್ರೋಗ್ರಾಮ್ “ವಿಷನ್ 2030” ಗುರಿಯನ್ನು ತಲುಪುವ ಯೋಜನೆಯ ಕಾರ್ಯಕ್ರಮದ ಭಾಗವಾಗಿದೆ.

ಅರೆಬಿಕ್ ಭಾಷೆಯನ್ನು ಪ್ರಾದೇಶಿಕವಾಗಿ ಹಾಗೂ ಅಂತರ್ರಾಷ್ಟ್ರೀಯವಾಗಿ ಪ್ರಚಾರಗೈಯಲು ಹಲವು ಯೋಜನೆ ಹಮ್ಮಿಕೊಂಡದ್ದಾಗಿ ಕಿಂಗ್ ಸಲ್ಮಾನ್ ಇಂಟರ್ ನ್ಯಾಶನಲ್ ಅರೆಬಿಕ್ ಬಾಷಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಹಸನ್ ಸಾಲಿಹ್ ಅಲ್ ಹಶ್ಮಿ ಹೇಳಿದರು.

ಸಂಸ್ಕೃತಿ ಸಚಿವ ಅಮೀರ್ ಬದ್ರ್ ಬಿನ್‌ ಅಬ್ದುಲ್ಲಾ ಬಿನ್ ಫರ್ಹಾನ್ ನಿರ್ದೇಶನದ ಪ್ರಕಾರ ಈ ಕಾರ್ಯಕ್ರಮ ನಡೆಯುತ್ತವೆ. ಈ ಪ್ರಯುಕ್ತ ಜವಾಹರಲಾಲ್ ನೆಹರು ಯುನಿವರ್ಸಿಟಿ ಸಹಕಾರದಿಂದ ಅಕಾಡೆಮಿಕ್ ಅರೆಬಿಕ್ ಬಾಷೆ ಕಲಿಯುವವರಿಗಾಗಿ ಕೆಲವು ಸ್ಪರ್ಧೆಗಳನ್ನು ಆಯೋಜಿಸುತ್ತದೆ.

ಪಾರಾಯಣ, ಕತೆ ಹೇಳುವುದು, ಕಾಲಿಗ್ರಾಫಿ ಈ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತದೆ. ಅಲ್ಲದೆ ಜವಹರಲಾಲ್ ಕೇರಳ ವಿ.ವಿಯ 500 ವಿಧ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತದೆ.

ಅರೆಬಿಕ್ ಬಾಷೆಯ ಬೆಳವಣಿಗೆ, ವ್ಯಾಪಕವಾಗಿ ಹರಡುವಿಕೆ ಇದರ ಉದ್ದೇಶ. ಇದರಲ್ಲಿ ಹೆಚ್ಚು ತೊಡಗಿಸಿಕೊಂಡವರನ್ನೂ ಸಂಸ್ಥೆ ಗೌರವಿಸಲಿದೆ. ಸಂವಾದ, ವಿಚಾರ ಗೋಷ್ಠಿ, ಚಾನಲ್ ಚರ್ಚೆ, ಪ್ರವಾಸ ಕಾರ್ಯಕ್ರಮ ನಡೆಯಲಿದೆ. ಓದುವಿಕೆ, ಬರೆಯುವಿಕೆ, ಮಾತನಾಡುವುದನ್ನು ಅಭಿವೃದ್ಧಿ ಪಡಿಸಲಾಗುವುದು.

ಅರೆಬಿಕ್ ಬಾಷಾ ಮಾಸಾಚರಣೆ ಕಾರ್ಯಕ್ರಮ ಈ ಹಿಂದೆ ಉಝ್ಬೆಕಿಸ್ಥಾನ,ಇಂಡೋನೇಷ್ಯಾ, ಚೀನಾ ಮುಂತಾದೆಡೆಗಳಲ್ಲಿ ನಡೆಸಲಾಗಿತ್ತು.

SHARE THIS POST VIA

About editor

Check Also

ಪ್ರವಾದಿಯ ಸಮಾಧಿ ದರ್ಶನಕ್ಕೆ ತೆರೆದ ‘ಶಾಂತಿಯ ದಾರಿ’: ಆರು ನಿಮಿಷ ಸಮಾಧಿ ವೀಕ್ಷಣೆಗೆ ಅವಕಾಶ

ಪ್ರವಾದಿಯವರ ಸಮಾಧಿಗೆ ಭೇಟಿ ನೀಡುವವರ ಸೌಲಭ್ಯಕ್ಕಾಗಿ ಶಾಂತಿಯ ದಾರಿ ಎಂಬ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ತೀವ್ರ ಜನಸಂದಣಿಯಿಂದಾಗಿ ಜನರಿಗೆ …