Home / ವಾರ್ತೆಗಳು / ಡಾ. ಕಫೀಲ್ ಆರೋಪ ಮುಕ್ತ ; ಆ ಮಕ್ಕಳ ಜೀವ ಉಳಿಸಿದಕ್ಕೆ ಹೊಗಳಿದ ತನಿಖಾ ಸಂಸ್ಥೆ

ಡಾ. ಕಫೀಲ್ ಆರೋಪ ಮುಕ್ತ ; ಆ ಮಕ್ಕಳ ಜೀವ ಉಳಿಸಿದಕ್ಕೆ ಹೊಗಳಿದ ತನಿಖಾ ಸಂಸ್ಥೆ

ಉತ್ತರ ಪ್ರದೇಶ: ಗೋರಕ್ ಪುರದಲ್ಲಿ ಮಕ್ಕಳು ಆಮ್ಲಜನಕ ಕೊರತೆಯಿಂದಾಗಿ 63 ಮಕ್ಕಳು ಅಸುನೀಗಿದ್ದರು. ಈ ಸಂದರ್ಭದಲ್ಲಿ ಡಾ.ಕಫೀಲ್ ಬೇರೆಡೆಯಿಂದ ಆಮ್ಲಜನಕ ಪೂರೈಸಿ ಮಕ್ಕಳ ಪ್ರಾಣ ಉಳಿಸಲು ಪ್ರಮಾಣಿಕ ಪ್ರಯತ್ನ ನಡೆಸಿದ್ದರು.

ರಾಜ್ಯ ಸರಕಾರ ಈ ಸಂದರ್ಭದಲ್ಲಿ ಡಾ.ಕಫೀಲ್ ಖಾನ್ ರನ್ನು ಕಟಕಟೆಯಲ್ಲಿ ನಿಲ್ಲಿಸಿ ಭ್ರಷ್ಟಾಚಾರ, ನಿರ್ಲಕ್ಷ್ಯದ ಆರೋಪದಲ್ಲಿ ಒಂಭತ್ತು ತಿಂಗಳು ಜೈಲಿನಲ್ಲಿರಿಸಿ ಸರಕಾರ ತನ್ನ ನಿರ್ಲಕ್ಷ್ಯವನ್ನು ಪ್ರಮಾಣಿಕ ಅಧಿಕಾರಿಯ ಮೇಲೆ ಹಾಕಲು ಯತ್ನಿಸಿತ್ತು.

ಇದೀಗ ರಾಜ್ಯ ಸರಕಾರವೇ ನೇಮಿಸಿದ್ದ ತನಿಖಾ ತಂಡ ಡಾ.ಕಫೀಲ್ ಖಾನ್ ಅವರ ಮೇಲಿನ ಆರೋಪ ಸುಳ್ಳೆಂದು ಸಾಬೀತು ಪಡಿಸಿದ್ದು ಮತ್ತು ಅವರು ಆ ತುರ್ತು ಪರಿಸ್ಥಿತಿಯಲ್ಲಿ ಪ್ರಮಾಣಿಕವಾಗಿ ಮಕ್ಕಳ ಪ್ರಾಣ ರಕ್ಷಿಸಲು ಪ್ರಯತ್ನಿಸಿದಕ್ಕೆ ಹೊಗಳಿದೆ.

ಸರಕಾರದ ನಿರ್ಲಕ್ಷ್ಯವನ್ನು ಅಡಗಿಸಲು ಪ್ರಮಾಣಿಕ ವೈದ್ಯರ ಮೇಲೆ ಈ ಆರೋಪ ಮಾಡಲಾಗಿತ್ತು ಎಂಬುದು ಸಾಬೀತಾಗಿದೆ.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …