Home / ವಾರ್ತೆಗಳು / ಚೀನಾ ಕಮ್ಯುನಿಸ್ಟ್ ಸರಕಾರದಿಂದ ಮುಂದುವರಿದ ಮುಸ್ಲಿಂ ಅಲ್ಪಸಂಖ್ಯಾತರ ದಮನ

ಚೀನಾ ಕಮ್ಯುನಿಸ್ಟ್ ಸರಕಾರದಿಂದ ಮುಂದುವರಿದ ಮುಸ್ಲಿಂ ಅಲ್ಪಸಂಖ್ಯಾತರ ದಮನ

ಚೀನಾ – ಚೀನಾದ ವಾಯುವ್ಯದಲ್ಲಿ ಮುಸ್ಲಿಮರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶದ ಮೇಲೆ ಚೀನಾ ಸರಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ವರದಿಯಾಗಿದೆ. ಅಲ್ಲಿನ ಹೆಚ್ಚಿನ ನಿವಾಸಿಗಳು ಧರ್ಮನಿಷ್ಠ ಮುಸ್ಲಿಮರು. ಮಸೀದಿಗಳ ಮೇಲಿನ ಗುಮ್ಮಟಗಳು ಮತ್ತು ಮಿನಾರ್‌ಗಳನ್ನು ಅಧಿಕಾರಿಗಳು ನಾಶ ಪಡಿಸಿದ್ದಾರೆ. “ಲಿಟಲ್ ಮಕ್ಕಾ” ಎಂದು ಕರೆಯಲ್ಪಡುವ ಒಂದು ಸಣ್ಣ ಹಳ್ಳಿಯ ಮೇಲೆಯೂ ಆಕ್ರಮಣ ನಡೆದಿದೆ.

ಅದೇ ರೀತಿಯ ಧ್ವಂಸವನ್ನು ಮುಸ್ಲಿಮರು ವಾಸಿಸುತ್ತಿರುವ ಇನ್ನರ್, ಮಂಗೋಲಿಯಾ ಹೆನಾನ್ ಮತ್ತು ನಿಂಗ್ಕ್ಸಿಇತ್ಯಾದಿ ಪ್ರದೇಶಗಳಲ್ಲೂ ನಡೆದಿದೆ. ಮಾತ್ರವಲ್ಲ ದಕ್ಷಿಣ ಪ್ರಾಂತ್ಯದ ಯುನ್ನಾನ್‌ನಲ್ಲಿ ಮೂರು ಮಸೀದಿಗಳನ್ನು ಮುಚ್ಚಲಾಗಿದ್ದು, ಬೀಜಿಂಗ್‌ನಿಂದ ನಿಂಗ್ಕ್ಸಿಯಾ ವರೆಗೆ ಅಧಿಕಾರಿಗಳು ಅರೇಬಿಕ್ ಲಿಪಿಯನ್ನು ಸಾರ್ವಜನಿಕವಾಗಿ ಬಳಸುವುದನ್ನು ನಿಷೇಧಿಸಿದ್ದಾರೆ.

ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯಗಳ ಮೇಲಿನ ಈ ದಬ್ಬಾಳಿಕೆಯು ಚೀನಾದ ಕಮ್ಯುನಿಸ್ಟ್ ಪಕ್ಷದ ಹೊಸ ಸ್ವರೂಪವನ್ನು ಪ್ರತಿನಿಧಿಸುತ್ತದೆ. ದಶಕಗಳ ಉದಾರ ಧೋರಣೆಯಿಂದಾಗಿ ಚೀನಾದಲ್ಲಿ ಇಸ್ಲಾಂ ಧರ್ಮ ಹೆಚ್ಚಿನ ಜನರನ್ನು ಆಕರ್ಷಿಸಿತ್ತು. ಕ್ಸಿನ್‌ಜಿಯಾಂಗ್‌ನಲ್ಲಿ ಉಯಿಘರ್‌ಗಳೊಂದಿಗೆ ಪ್ರಾರಂಭವಾದ ಮುಸ್ಲಿಮರ ಮೇಲಿನ ಕಠಿಣ ದಮನವು ಈಗ ಹೆಚ್ಚಿನ ಪ್ರದೇಶಗಳಿಗೆ ವ್ಯಾಪಿಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಮುಸ್ಲಿಮರ ಮೇಲಿನ ದೌರ್ಜನ್ಯವು ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅವರ ಕಠಿಣ ನೀತಿಗಳನ್ನು ಪ್ರತಿಬಿಂಬಿಸುತ್ತವೆ. ಕ್ಸಿನ್‌ಜಿಯಾಂಗ್‌ನ ಪಶ್ಚಿಮ ಪ್ರದೇಶದಲ್ಲಿನ ಉಯಿಘರ್ ಮುಸ್ಲಿಮರ ದಬ್ಬಾಳಿಕೆಯು ಚೀನಾದ ಇತರ ಭಾಗಗಳಲ್ಲಿ ರಕ್ತ ಹರಿಯಲು ಪ್ರಾರಂಭಿಸಿದೆ. ಹುಯಿ ಮತ್ತು ಇತರ ಮುಸ್ಲಿಮರನ್ನು ಗುರಿಯಾಗಿಸಿಕೊಂಡ ದೌರ್ಜನ್ಯವು ಉಯಿಘರ್‌ಗಳಿಗಿಂತ ಶಕ್ತವಾಗಿ ಸಂಯೋಜಿಸಲ್ಪಟ್ಟಿದೆ ಎಂದು ವರದಿಯಾಗಿದೆ. . ಚೀನಾದಲ್ಲಿ ಇಸ್ಲಾಂ ಧರ್ಮದ ಬಗೆಗಿನ ದ್ವೇಷಕ್ಕೆ ಸುದೀರ್ಘ ಇತಿಹಾಸವಿದ್ದು, ಈ ದೌರ್ಜನ್ಯವು ಮುಂದುವರಿಸುತ್ತಿದೆ.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …