Home / ವಾರ್ತೆಗಳು / ಪ್ರವಾಸಿ ಬದುಕಿನ ಅಳಿದುಳಿದ ಸಂಪಾದನೆ ನೆರೆ ನೀರಲ್ಲಿ ಕೊಚ್ಚಿ ಹೋದಾಗ …ಆಸರೆಯಾದ HRS

ಪ್ರವಾಸಿ ಬದುಕಿನ ಅಳಿದುಳಿದ ಸಂಪಾದನೆ ನೆರೆ ನೀರಲ್ಲಿ ಕೊಚ್ಚಿ ಹೋದಾಗ …ಆಸರೆಯಾದ HRS

ಸಿದ್ದಾಪುರ : ಕೆಲವು ವಷ೯ಗಳಿಂದ ಸೌದಿಯಲ್ಲಿದ್ದು ಫಲ ಕಾಣದೇ ಅಳಿದುಳಿದ ಸಂಪಾದನೆಯೊಂದಿಗೆ ಊರಿಗೆ ಬಂದವರು ಕಟ್ಟೆಮಾಡುವಿನ ನಿವಾಸಿ. ಊರಿನಲ್ಲಿ ದಿನದೂಡಲು ಒಂದು ಓಮ್ನಿ ಕಾರಿನಲ್ಲಿ ಒಂದಷ್ಟು ಬಟ್ಟೆಗಳನ್ನು ಇಟ್ಟು ಮನೆ ಬಾಗಿಲಿಗೆ ಹೋಗಿ ವ್ಯಾಪಾರ ನಡೆಸುತ್ತಿದ್ದರು.

ಎಂದಿನಂತೆ ಅಂದು ಕೂಡಾ ಬಟ್ಟೆಗಳ ಕಟ್ಟುಗಳನ್ನು ಪೇರಿಸಿ ಮನೆಯಲ್ಲಿ ಇಟ್ಟಿದ್ದರು. ನೆರೆ ನೀರು ಉಕ್ಕಿ ಬಂದಾಗ ತಾರಸಿಯ ಕೆಳಗಿನ ಸಿಮೆಂಟ್ ಹಲಗೆಯಲ್ಲಿ ತೆಗೆದಿಟ್ಟರು. ಮತ್ತಷ್ಟು ಉಕ್ಕಿ ಹರಿದ ನೀರು ಎಲ್ಲವನ್ನೂ ಕೊಚ್ಚಿಕೊಂಡು ಹೋದಾಗ ಬದುಕಿಗೆ ಕತ್ತಲಾವರಿಸಿತು. ಕಟ್ಟೆ ಮಾಡುವಿನ ಮನೆಯಲ್ಲಿ ದುಖಃ ಕಟ್ಟೆಯೊಡೆಯಿತು.

ಮಾಹಿತಿ ಕಲೆ ಹಾಕಿದ ಸಿದ್ದಾಪುರದ ರಿಲೀಫ್ ಸೆಲ್ ನ HRS ಕಾಯ೯ಕತ೯ರು ಅವರನ್ನು ತಮ್ಮ ಉಚಿತ ಸೂಪರ್ ಮಾಕೆ೯ಟ್ ಗೆ ಬರ ಹೇಳಿ ಅವರ ವ್ಯಾಪಾರಕ್ಕೆ ಬೇಕಾದ ಸುಮಾರು 50 ಸಾವಿರದಷ್ಟು ಬೆಲೆ ಬಾಳುವ ವಿವಿಧ ರೀತಿಯ ಬಟ್ಟೆ ಬರೆಗಳನ್ನು ನೀಡಿ ಸಾಂತ್ವನ ಪಡಿಸಿ ಕಳುಹಿಸಿಕೊಟ್ಟರು.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …