Home / ವಾರ್ತೆಗಳು / ಬಾಹ್ಯಾಕಾಶದಿಂದ ಪವಿತ್ರ ಮಕ್ಕಾದ ವೈಮಾನಿಕ ದೃಶ್ಯವನ್ನು ಕಳುಹಿಸಿದ ಹಜ್ಜಾ ಅಲ್ ಮನ್ಸೂರಿ: ಯುಎಇಯಲ್ಲಿ ಮಿಂಚು

ಬಾಹ್ಯಾಕಾಶದಿಂದ ಪವಿತ್ರ ಮಕ್ಕಾದ ವೈಮಾನಿಕ ದೃಶ್ಯವನ್ನು ಕಳುಹಿಸಿದ ಹಜ್ಜಾ ಅಲ್ ಮನ್ಸೂರಿ: ಯುಎಇಯಲ್ಲಿ ಮಿಂಚು

ಯುಎಇ: ಸೆ. 4- ಯುಎಇ ಗಗನಯಾತ್ರಿ ಹಜ್ಜಾ ಅಲ್ ಮನ್ಸೂರಿ ಬುಧವಾರ ಬಾಹ್ಯಾಕಾಶ ಕೇಂದ್ರದಿಂದ ಇಸ್ಲಾಮಿನ ಪವಿತ್ರ ತಾಣವಾದ ಮಕ್ಕಾದ ಅದ್ಭುತ ವೈಮಾನಿಕ ನೋಟವನ್ನು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್ ನಿಂದ ಮಸ್ಜಿದುಲ್ ಹರಾಮ್ ನ ಅದ್ಭುತ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಕಳೆದ ಮಂಗಳವಾರ ಅವರು ಬಾಹ್ಯಾಕಾಶದಿಂದ ಯುಎಇಯ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಅರಬ್ ಆಗಿ ಇತಿಹಾಸ ನಿರ್ಮಿಸಿರುವ ಹಜ್ಜಾ ಅಲ್ ಮನ್ಸೂರಿ, ಎಂಟು ದಿನಗಳ ಕಾರ್ಯಾಚರಣೆಯ ನಂತರ ಭೂಮಿಗೆ ಮರಳಲಿದ್ದಾರೆ. ಅವರು ಸಾಂಪ್ರದಾಯಿಕ ಎಮಿರೇಟ್ ಉಡುಪನ್ನು ಬಾಹ್ಯಾಕಾಶದಲ್ಲಿ ಧರಿಸಿದ್ದರು.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …