Home / ವಾರ್ತೆಗಳು / ಕೊಡಗು ಸಿದ್ದಾಪುರ ಮಹಾ ಪ್ರಳಯದಿಂದ ಪರೋಕ್ಷವಾಗಿ ತತ್ತರಿಸಿದ ಕೂಲಿ ಕಾಮಿ೯ಕರಿಗೆ HRS ವತಿಯಿಂದ ಬಟ್ಟೆ ಹಾಗೂ ಪಾತ್ರೆಗಳ ಉಚಿತ ಮಹಾ ಸಂತೆ

ಕೊಡಗು ಸಿದ್ದಾಪುರ ಮಹಾ ಪ್ರಳಯದಿಂದ ಪರೋಕ್ಷವಾಗಿ ತತ್ತರಿಸಿದ ಕೂಲಿ ಕಾಮಿ೯ಕರಿಗೆ HRS ವತಿಯಿಂದ ಬಟ್ಟೆ ಹಾಗೂ ಪಾತ್ರೆಗಳ ಉಚಿತ ಮಹಾ ಸಂತೆ

ಸಿದ್ದಾಪುರ: ಇತ್ತೀಚೆಗೆ ಸಂಭವಿಸಿದ ಮಹಾ ಪ್ರಳಯದಿಂದ ಸಂತ್ರಸ್ತರಾದ ಜನರಿಗೆ HRS ವತಿಯಿಂದ ಜಾತಿ ಮತ ಭೇದವಿಲ್ಲದೇ ಹತ್ತು ಹಲವು ಸಹಾಯ ಸಹಕಾರಗಳನ್ನು ನೀಡಿ ಸಮಾಜ ಸೇವಾ ಕಾಯ೯ಗಳಲ್ಲಿ ಮಾದರಿಯಾಗಿರುವ ಸಂಸ್ಥೆ ಈ ಹಿಂದೆ ಸಂತ್ರಸ್ತರಿಗಾಗಿ ಸಿದ್ದಾಪುರದ ಹಿರಾ ಮಸೀದಿಯ ಕೆಳ ಅಂತಸ್ತಿನಲ್ಲಿ ಸೂಪರ್ ಮಾಕೆ೯ಟನ್ನು ತೆರೆದು ಅಗತ್ಯ ವಸ್ತುಗಳನ್ನು ವಿತರಿಸಲಾಗಿತ್ತು.

ಅದೇ ರೀತಿ ಪ್ರಳಯದಿಂದ ಪರೋಕ್ಷವಾಗಿ ನೊಂದ ಬಡ ಕೂಲಿ ಕಾಮಿ೯ಕರಿಗಾಗಿ ಉಡುಪುಗಳ ಉಚಿತ ಸಂತೆಯನ್ನು ವಾರದ ಹಿಂದೆ ನಡೆಸಲಾಗಿತ್ತು.

ಇದೀಗ ಅವರಿಗಾಗಿ ಹಿರಾ ಮಸೀದಿ ಅಂಗಣದಲ್ಲಿ ಸ್ಥಳೀಯ ಸಂತೆಯ ದಿನದಂದು ಬಟ್ಟೆ ಮತ್ತು ಪಾತ್ರೆಗಳ ಉಚಿತ ಮಹಾ ಸಂತೆಯನ್ನು ಆಯೋಜಿಸಲಾಗಿದ್ದು, ಸುಮಾರು 500ಕ್ಕೂ ಮಿಕ್ಕಿ ಕುಟುಂಬಸ್ಥರಿಗೆ ಒಂದು ಲಕ್ಷದಷ್ಟು ಬೆಲೆ ಬಾಳುವ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಪುರುಷ ವಿಭಾಗದ ವಸ್ತ್ರಗಳ ವಿತರಣಾ ಉದ್ಘಾಟನೆಯನ್ನು ಪತ್ರಕತ೯ರಾದ ಶ್ರೀ ರಂಜಿತ್ ನಿವ೯ಹಿಸಿದರು. ಮಹಿಳಾ ವಿಭಾಗದ ವಸ್ತ್ರಗಳ ವಿತರಣೆಯನ್ನು ಸಿದ್ದಾಪುರ CITU ಮುಖಂಡರಾದ ಶ್ರೀ ರಮೇಶ್ ರವರು ಮಕ್ಕಳ ವಿಭಾಗದ ವಸ್ತ್ರಗಳನ್ನು ಸಿದ್ದಾಪುರ ರಿಲೀಫ್ ಸೆಲ್ ಸಂಚಾಲಕರಾದ ಎಂ.ಕೆ.ಅಶ್ರಫ್, ಪಾತ್ರೆಗಳ ವಿತರಣೆಯನ್ನು ಕೊಡಗು HRS ಸ್ಥಾಪಕ ಸದಸ್ಯರಾದ ನೌಫಲ್ ಚಾಯ್ಸ್‌ನಿವ೯ಹಿಸಿದರು.

ಮಂಗಳೂರು ವಲಯ ಸಂಚಾಲಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸೆಲ್ ಕಾಯ೯ದಶಿ೯ ಬಶೀರ್ T.A, ಇಬ್ರಾಹೀಮ್, ಹನೀಫ್, ಇಸ್ಮಾಯಿಲ್, ಅಮೀರ್, ನಿಸಾರ್ ಹಾಗೂ HRS ವಿದ್ಯಾಥಿ೯ಗಳು ಭಾಗವಹಿಸಿದ್ದರು.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …