Home / ಲೇಖನಗಳು / ಜನರಿಗೆ ಇಸ್ಲಾಮ್ ಇಷ್ಟವಾದದ್ದು ಹೀಗೆ…

ಜನರಿಗೆ ಇಸ್ಲಾಮ್ ಇಷ್ಟವಾದದ್ದು ಹೀಗೆ…

 ಫ್ರೊಫೆಸರ್ ರಿಚರ್ಡ್ ಹ್ಯಾಮಿಲ್ಟನ್

ಆಂಗ್ಲ ಚಿಂತಕ ರಿಚರ್ಡ್ ಹ್ಯಾಮಿಲ್ಟನ್ರು ತನ್ನ ಜೀವನದ ಹೆಚ್ಚಿನ ಭಾಗವನ್ನು ಜಗತ್ತಿನ ವಿವಿಧ ಧರ್ಮಗಳ ಬಗ್ಗೆ ಅಧ್ಯಯನದಲ್ಲಿ ಕಳೆದಿದ್ದಾರೆ. ಅವರ ಪ್ರಕಾರ ಇಂದು ಅಸ್ತಿತ್ವದಲ್ಲಿರುವ ಧರ್ಮಗಳ ಪೈಕಿ ಇಸ್ಲಾಮ್ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ.

ಬಹಳಷ್ಟು ಸಮಸ್ಯೆ ಮತ್ತು ಅಡಚಣೆಗಳ ಹೊರತಾಗಿಯು ಈ ಧರ್ಮವು ಜನರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಿದೆ. ಈ ಬಗ್ಗೆ ಬಹಳಷ್ಟು ಕಡೆಗಳಲ್ಲಿ ಆಶ್ಚರ್ಯ ವ್ಯಕ್ತಪಡಿಸಲಾಗುತ್ತದೆ. ಆದರೆ ಮನುಷ್ಯನ ಪ್ರಕೃತಿ ಎಲ್ಲ ಕಾಲಗಳಲ್ಲಿ ಒಂದೇ ರೀತಿಯಾಗಿತ್ತು. ಅದು ಎಂದೂ ತನಿಗಿಷ್ಟ ಮತ್ತು ತನಗೆ ಪ್ರಯೋಜನಕಾರಿಯಾದ ವಿಷಯವನ್ನೇ ಸ್ವೀಕರಿಸಿಕೊಳ್ಳುತ್ತದೆ.

ಕೆಲವು ಚಿಂತಕರು ಧರ್ಮವನ್ನು ಸುಧಾರಣೆ ಮತ್ತು ಉನ್ನತಿಯ ಒಂದು ಉತ್ತಮ ದಾರಿ ಎಂದು ವಿಶ್ಲೇಷಿಸಿದ್ದಾರೆ. ಅವರು ಧರ್ಮಗಳ ಬಗ್ಗೆ ಹೀಗೆ ಹೇಳುತ್ತಾರೆ, “ಧರ್ಮ ಪ್ರಚಾರಕರು ಮನುಷ್ಯರ ಹೃದಯಗಳಲ್ಲಿ ಒಳಿತು ಮತ್ತು ಕೆಡುಕುಗಳ ಭಾವನೆಯನ್ನು ಹುಟ್ಟು ಹಾಕಲು ಬಯಸುತ್ತಾರೆ. ಆದ್ದರಿಂದಲೇ ಅವರು ಒಂದು ಕಾಣದ ಶಕ್ತಿಯ ಭಯ ಹುಟ್ಟಿಸಿ ಇದನ್ನು ಇತರ ಆಂದೋಲನಗಳಿಗಿಂತ ಪ್ರಭಾವಪೂರ್ಣಗೊಳಿಸುತ್ತಾರೆ. ಎಲ್ಲಿಯವರೆಗೆ ಮನುಷ್ಯ ಈ ಕಾಣದ ಶಕ್ತಿಗೆ ಭಯಭೀತನಾಗಿರುತ್ತಾನೋ ಅಲ್ಲಿಯವರೆಗೆ ಆ ಧರ್ಮದ ಶಕ್ತಿಯನ್ನು ಅವನು ಒಪ್ಪಿಕೊಳ್ಳುತ್ತಾನೆ. ಯಾವ ಧರ್ಮದಲ್ಲಿ ಸುಧಾರಣೆಯ ನಿಟ್ಟಿನಲ್ಲಿ ಇಂತಹ ಆಕರ್ಷಣೆ ಇರುತ್ತದೋ ಆ ಧರ್ಮ ಹೆಚ್ಚು ಜನಾಕರ್ಷಣೆ ಹೊಂದುತ್ತದೆ ಮತ್ತು ಹೆಚ್ಚು ಕಾಲ ತನ್ನ ಅಸ್ತಿತ್ವವನ್ನು ಉಳಿಸುತ್ತದೆ.”

ಧರ್ಮವು ಮನುಷ್ಯನ ಸುಧಾರಣೆಯ ಒಂದು ಆಧ್ಯಾತ್ಮಿಕ ಆಂದೋಲನವಾಗಿದೆ. ಅದರ ಸಂಬಂಧ ಒಂದು ಶಕ್ತಿಯ ಜೊತೆ ಇದೆ. ಅಂದರೆ ಆ ಶಕ್ತಿಯನ್ನು ವಿವಿಧ ಧರ್ಮಗಳು ವಿವಿಧ ನಾಮಗಳಿಂದ ಹೆಸರಿಸಿದೆ ಎಂಬ ಚರ್ಚೆ ಮಾಡಬೇಕಾದ ಹೆಚ್ಚು ಅಗತ್ಯವಿಲ್ಲ. ಆದರೆ ಬುದ್ಧಿಯ ಆಧಾರದಲ್ಲಿ ಹೇಳುವುದಾದರೆ, ಮನುಷ್ಯನ ಸುಧಾರಣೆ ಮತ್ತು ಉನ್ನತಿಯಲ್ಲಿ ಬಾಹ್ಯ ಮತ್ತು ಆಂತರಿಕ ಕಾರಣಗಳು ಜತೆಗೂಡಿ ಕಾರ್ಯ ನಿರ್ವಹಿಸುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಕಾರ್ಯ ನಿರ್ವಹಿಸದಿದ್ದರೆ ಅಥವಾ ತಪ್ಪು ಕಾರ್ಯವೆಸಗಿದರೆ ಮನುಷ್ಯನ ಸುಧಾರಣೆಯ ಉದ್ದೇಶ ಪೂರ್ಣಗೊಳ್ಳುವುದಿಲ್ಲ ಎಂಬುದನ್ನು ಒಪ್ಪಲೇಬೇಕಾಗುತ್ತದೆ.

ಆದ್ದರಿಂದಲೇ ಇಸ್ಲಾಮ್ ಧರ್ಮವನ್ನು ಒಂದು ಸಂಪೂರ್ಣ ಜೀವನ ವ್ಯವಸ್ಥೆಯಾಗಿ ಅದು ಸ್ಪಷ್ಟ ಪಡಿಸಿದೆ. ಜೀವನದ ಎಲ್ಲ ರಂಗದಲ್ಲಿ ಮನುಷ್ಯರಿಗೆ ಆಕರ್ಷಣೆ ಇಟ್ಟಿದೆ ಎಂದು ಬಹುತೇಕ ಚಿಂತಕರು ಈ ಬಗ್ಗೆ ಒಮ್ಮತಾಭಿಪ್ರಾಯ ಹೊಂದಿದ್ದಾರೆ. ಆದ್ದರಿಂದ ಇಸ್ಲಾಮಿನಲ್ಲಿ ಸಂಪೂರ್ಣ ಆಕರ್ಷಣೆ ಇದೆ. ಆದ್ದರಿಂದಲೇ ಅದಕ್ಕೆ ಜನ ಮತ್ತು ಶಕ್ತಿ ದೊರಕಿದೆ. ಮನುಷ್ಯ ಯಾವುದೇ ಒಂದು ಧರ್ಮವನ್ನು ಸ್ವೀಕರಿಸಿದ ನಂತರ ಅದರ ಶಿಕ್ಷಣವನ್ನು ಕಣ್ಣು ಮುಚ್ಚಿ ಪಾಲಿಸುತ್ತಾನೆ. ಆದರೆ ಇಸ್ಲಾಮನ್ನು ಸ್ವೀಕರಿಸುವ ಮೊದಲು ಯಾವುದೇ ಧರ್ಮವು ಅವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನೂ ಅವನು ನೋಡ ಬಯಸುತ್ತಾನೆ. ಆದ್ದರಿಂದ ಇಸ್ಲಾಮೀ ಸಂದೇಶ ಪ್ರಾರಂಭವಾದಾಗ ಇಸ್ಲಾಮಿನಲ್ಲಿರುವ ಮೌಲ್ಯಗಳು ಬೇರಾವ ಧರ್ಮದಲ್ಲೂ ಇಲ್ಲ ಎಂಬ ದೃಷ್ಟಿಕೋನದಿಂದ ನೋಡಲಾಗಿತ್ತು ಮತ್ತು ಜನರಿಗೆ ಈ ವಿಷಯ ಮನವರಿಕೆಯಾಗಿತ್ತು.

ಉದಾಹರಣೆಗೆ ವರ್ಣ ಮತ್ತು ಗೋತ್ರದ ಆಧಾರದಲ್ಲಿ ಬೆಳೆದಂತಹ ಸಮಾಜದಲ್ಲಿ, ದುರ್ಬಲರು ಮತ್ತು ಬಡವರ ಜೊತೆಗೆ ಮಹಿಳೆಯರಿಗೂ ಯಾವುದೇ ಘನತೆ-ಗೌರವದ ಜೀವನ ನಡೆಸಲು ಅವಕಾಶವಿರಲಿಲ್ಲ. ಆ ಸಮಾಜದಲ್ಲಿ ಇಸ್ಲಾಮ್ ಮಾನವ ಸಮಾನತೆಯ ಶಿಕ್ಷಣದಿಂದಾಗಿ ಅಲ್ಪಾವಧಿಯಲ್ಲೇ ತನ್ನ ಕಡೆಗೆ ಗಮನ ಸೆಳೆಯಿತು. ನಂತರ ಅವರು ಮುಸ್ಲಿಮರ ಜೀವನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಈ ಶಿಕ್ಷಣವನ್ನೂ ಪ್ರಾಯೋಗಿಕವಾಗಿ ನೋಡಿದಾಗ, ಇಸ್ಲಾಮೀ ಸಮಾಜದಲ್ಲಿ ಕೇವಲ ಅವರ ಮುಲಭೂತ ಹಕ್ಕುಗಳು ಮಾತ್ರ ಸುರಕ್ಷಿತವಲ್ಲ, ಬದಲಾಗಿ ಸಮಾಜವು ಅವರ ಉನ್ನತಿಗೆ ಸಂಪೂರ್ಣ ವಾತಾವರಣವನ್ನೂ ನೀಡುತ್ತದೆ ಎಂಬುದನ್ನು ಮನಗಂಡರು.

ಈ ನಿಟ್ಟಿನಲ್ಲಿ ಇಸ್ಲಾಮ್ ಗುಲಾಮರಿಗೆ ಯಾವ ರೀತಿಯ ಹಕ್ಕುಗಳನ್ನು ನೀಡಿತ್ತು ಮತ್ತು ಸಮಾಜದಲ್ಲಿ ಮಹಿಳೆಯ ಸ್ಥಾನಮಾನ ಎಷ್ಟು ಉನ್ನತಿಗೇರಿತ್ತು ಇಂತಹ ಹಲವಾರು ಘಟನೆಗಳನ್ನೂ ವಿವರಿಸುವುದು ಇಲ್ಲಿ ಮುಖ್ಯ ಎಂದು ಅನಿಸುತ್ತದೆ. ಅದರಿಂದಾಗಿ ಇಸ್ಲಾಮಿಗೆ ಪವಾಡ ಸದೃಶ ಬೆಳವಣಿಗೆ ದೊರಕಿತ್ತು.

ದ್ವಿತೀಯ ಖಲೀಫ ಉಮರ್(ರ) ಆಡಳಿತಾವಧಿಯಲ್ಲಿ ಇಸ್ಲಾಮ್ ವ್ಯಾಪಿಸಿದ್ದು ಮಾತ್ರವಲ್ಲ ಅವರ ಆಡಳಿತ ದೂರ ದೂರದವರೆಗೆ ಹಬ್ಬಿತ್ತು. ಹಾಗೂ ಬಹಳಷ್ಟು ಜನರು ಇಸ್ಲಾಮನ್ನು ಮನಸಾರೆ ಒಪ್ಪಿಕೊಳ್ಳುತ್ತಿದ್ದರು ಎಂಬುದು ಚರಿತ್ರೆಯಿಂದ ವ್ಯಕ್ತವಾಗುತ್ತದೆ.

ಇಸ್ಲಾಮಿನ ಇಂತಹ ಹಬ್ಬುವಿಕೆ ಮತ್ತು ಬೆಳವಣಿಗೆಯ ಬಗ್ಗೆ ಫ್ರೊಫೆಸರ್ ಅರ್ನಾಲ್ಡ್ ಈ ಘಟನೆಯನ್ನು ತಿಳಿಸುತ್ತಾರೆ.
“ಅಮ್ರ್ ಬಿನ್ ಆಸ್ ಈಜಿಪ್ಟನ್ನು ವಶಪಡಿಸಿ ಕೊಂಡ ಬಳಿಕ ಅವರೇ ಅಲ್ಲಿನ ಗವರ್ನರ್ ಆಗಿದ್ದರು. ಒಮ್ಮೆ ಈಜಿಪ್ಟ್ ನಲ್ಲಿ ಕುದುರೆ ಓಟ ಸ್ಪರ್ಧೆ ನಡೆಸಲಾಯಿತು. ಇದರಲ್ಲಿ ಗವರ್ನರ್ ರ ಮಗ ಮುಹಮ್ಮದ್ ಕೂಡಾ ಭಾಗವಹಿಸಿದ್ದರು. ಆದರೆ ಮಗನ ಕುದುರೆ ಓರ್ವ ಸಾಮಾನ್ಯ ಈಜಿಪ್ಟ್ ನೌಕರನ ಮುಂದೆ ಸೋತಿತು. ಗವರ್ನರ್ ಮಗ ಮುಹಮ್ಮದ್ ಬಿನ್ ಅಮ್ರ್ ಬಿನ್ ಆಸ್ ಕೋಪಗೊಂಡು ಆ ಪ್ರಜೆಗೆ ಒಂದು ಚಾಟಿಯೇಟು ಬಾರಿಸಿದರು. ಗವರ್ನರ್ ಅಮ್ರ್ ಬಿನ್ ಆಸ್‍ರಿಗೆ ಈ ವಿಷಯ ತಿಳಿದಾಗ ಈ ಪ್ರಜೆ ಖಲೀಫ ಉಮರ್(ರ) ಬಳಿ ಈ ವಿಷಯ ತಲುಪಿಸಿದರೆ ಎಂದು ಭಯಪಟ್ಟು ಅವನನ್ನು ಬಂಧಿಸಿದರು. ಆದರೆ ಆ ಪ್ರಜೆ ತಪ್ಪಿಸಿ ಖಲೀಫರ ಮುಂದೆ ತನ್ನ ಅಹವಾಲನ್ನು ತಿಳಿಸಿದರು. ಖಲೀಫ ಉಮರ್(ರ)ರವರು ಇಬ್ಬರನ್ನೂ ತನ್ನ ಬಳಿ ಕರೆದರು. ವಿಚಾರಣೆಯ ಬಳಿಕ ಉಮರ್(ರ) ಗವರ್ನರ್ ನ ಮಗನಿಗೆ ಅದೇ ರೀತಿ ಚಾಟಿಯೇಟು ನೀಡಿ ಪ್ರತೀಕಾರ ಪಡೆಯಲು ಪ್ರಜೆಗೆ ಆದೇಶ ನೀಡಿದರು. ಪ್ರಜೆ ಪ್ರತೀಕಾರ ಪಡೆದ ಬಳಿಕ ಉಮರ್(ರ) ಹೇಳಿದರು, ಈಗ ಗವರ್ನರ್ ಅಮ್ರ್ ಬಿನ್ ಆಸ್‍ರಿಗೂ ಚಾಟಿಯೇಟು ನೀಡು. ಯಾಕೆಂದರೆ ಅವರ ಮಗ ಇವರ ಬಲದಲ್ಲಿ ಹೀಗೆ ವರ್ತಿಸಿದ್ದನು.” ಆದರೆ ಆ ವ್ಯಕ್ತಿ ಉಮರ್‍ ರ (ರ) ಈ ಆದೇಶದಂತೆ ಮಾಡಲಿಲ್ಲ.

ಈ ಘಟನೆಯ ವಿವರಣೆ ಅರ್‍ನಾಲ್ಡ್ ಹೇಳುತ್ತಾರೆ,
“ಇಸ್ಲಾಮಿನ ಸಮಾನತೆ ಮತ್ತು ನ್ಯಾಯದ ಈ ಚಿತ್ರಣವು ಈಜಿಪ್ಟ್ ನಲ್ಲಿ ಇಸ್ಲಾಮಿನ ಬೆಳವಣಿಗೆಯಲ್ಲಿ ಬಹಳ ಸಹಕಾರಿಯಾಗಿದೆ. ಈಜಿಪ್ಟ್ ನ ಹೊರಗಿನ ಕ್ರೈಸ್ತರೂ ಕೂಡ, ತಮ್ಮ ಧರ್ಮದವರ ಆಳ್ವಿಕೆಯಿಂದ ಸಿಗದಂತಹ ನ್ಯಾಯ ಮತ್ತು ಸಮಾನತೆ ಇಸ್ಲಾಮಿನಲ್ಲಿದೆ ಎಂದು ಮನಗಂಡರು.”

ಇಸ್ಲಾಮ್ ಜನ ಮನ್ನಣೆಗಳಿಸಲು ಎರಡನೇ ಕಾರಣವೆಂದರೆ ಅದು ಮನುಷ್ಯರಿಗೆ ನೀಡಿದಂತಹ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಆದರೆ ಇಂದು ಈ ಮಾನವ ಹಕ್ಕು ಸಾಮಾನ್ಯವಾಗಿ ಪರಿಗಣಿಸಲ್ಪಡುತ್ತಿದೆ. ಆದರೆ ಆ ಕಾಲದಲ್ಲಿ ಮನುಷ್ಯನು ಇದರಿಂದ ಸಂಪೂರ್ಣ ವಂಚಿತನಾಗಿದ್ದ. ಇಸ್ಲಾಮಿನಲ್ಲಿ ಜನಪ್ರತಿನಿಧಿಗಳು ಜನತೆಯ ಅವಶ್ಯಕತೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಮಾತ್ರವಲ್ಲ, ಜನತೆಗೆ ಅವರ ಕಾರ್ಯವನ್ನು ವಿಮರ್ಶಿಸುವ ಅಧಿಕಾರವೂ ಇತ್ತು ಮತ್ತು ಅವರ ಮಾತುಗಳಿಗೆ ಬೆಲೆ ನೀಡಲಾಗುತ್ತಿತ್ತು. ಇದರಿಂದಾಗಿ ಜನರು ಇಸ್ಲಾಮಿನೆಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದರು. ಲೋಕದ ಅಭಿವೃದ್ಧಿಯಲ್ಲಿ ಅವರನ್ನು ಮುಂದೆ ಬರುವಂತೆ ಮಾಡುತ್ತಿದ್ದರು. ಇಂತಹ ಹಲವಾರು ಗುಣವಿಶೇಷತೆಗಳಿಂದಾಗಿಯೇ ಇಸ್ಲಾಮ್ ಜಗತ್ತಿನಾದ್ಯಂತ ಪಸರಿಸುತ್ತಿದೆ.

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಮಹಿಳೆ

✍️ ರಶೀದ್, ಉಪ್ಪಿನಂಗಡಿ ಸ್ತ್ರೀ ಸ್ವಾತಂತ್ರ‍್ಯದ ವಿಚಾರ ಬಂದಾಗ ಇಸ್ಲಾಮನ್ನು ತಪ್ಪಾಗಿ ಗ್ರಹಿಸುವವರ ಸಂಖ್ಯೆ ಬಹಳ ದೊಡ್ಡದಿದೆ. ಬರೀ ಬುರ್ಖಾವನ್ನು …