Home / ವಾರ್ತೆಗಳು / ಪ್ರವಾದಿಯವರ ಇಷ್ಟದ ಮದೀನಾದ ಅಲ್ ಕರ್ ಝ್ ಬಾವಿಯ ನವೀಕರಣ: ಪ್ರವಾಸಿಗರ ಪ್ರವೇಶಕ್ಕೆ ಮುಕ್ತ

ಪ್ರವಾದಿಯವರ ಇಷ್ಟದ ಮದೀನಾದ ಅಲ್ ಕರ್ ಝ್ ಬಾವಿಯ ನವೀಕರಣ: ಪ್ರವಾಸಿಗರ ಪ್ರವೇಶಕ್ಕೆ ಮುಕ್ತ

ಪ್ರವಾದಿ ಇತಿಹಾಸಕ್ಕೆ ಸಂಬಂಧಿಸಿ ಪ್ರಸಿದ್ಧವಾಗಿರುವ ಮದೀನಾದ ಅಲ್ ಕರ್ ಝ್ ಬಾವಿಯ ಪುನರ್ನವೀಕರಣ ಕಾರ್ಯ ಮುಗಿದಿದ್ದು ಇದೀಗ ಪ್ರವಾಸಿಗರ ಪ್ರವೇಶಕ್ಕೆ ತೆರೆಯಲಾಗಿದೆ.

ಈ ಬಾವಿಯನ್ನು ಟೂರಿಸಂ ಪ್ರದೇಶವಾಗಿ ಪರಿವರ್ತಿಸುವುದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ಈವರೆಗೆ ನಡೆಯುತ್ತಿತ್ತು.

ಹಜ್ ಮತ್ತು ಉಮ್ರಾ ಮಾಡಲು ಬರುವವರು ಪ್ರವಾದಿಯವರಿಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳನ್ನು ಕಾಣುವ ಉತ್ಸಾಹವನ್ನು ತೋರುತ್ತಾರೆ. ಅವರನ್ನು ಗುರಿಯಾಗಿಸಿಯೇ ಈ ಬಾವಿಯ ಪುನರ್ ನವೀಕರಣ ನಡೆದಿದೆ.

ಪ್ರವಾದಿ ಮುಹಮ್ಮದರು ಇಷ್ಟಪಟ್ಟ ಬಾವಿ ಇದಾಗಿತ್ತು. ಈ ಬಾವಿಗೆ ಮಸ್ಜಿದ್ದುನ್ನ ಬವಿಯಿಂದ 3 ಕಿಲೋಮೀಟರ್ ದೂರವಿದೆ. ಹಾಗೆಯೇ ಪ್ರವಾದಿತ್ವ ಲಭಿಸಿದ ಬಳಿಕದ ಮೊದಲ ಮಸೀದಿಯಾದ ಮಸ್ಜಿದುಲ್ ಕುಬಾದಿಂದ ದಕ್ಷಿಣ ಭಾಗಕ್ಕೆ ಒಂದುವರೆ ಕಿಲೋಮೀಟರ್ ಸಾಗಿದರೆ ಈ ಭಾವಿ ಸಿಗುತ್ತದೆ. ಕುರುಬಾನ್ ರಸ್ತೆಯ ಒಂದು ಶಾಲೆಗೆ ಹೊಂದಿಕೊಂಡು ಈ ಬಾವಿ ಅಸ್ತಿತ್ವದಲ್ಲಿ ಇದೆ.

ತನ್ನ ಮೃತ ದೇಹವನ್ನು ಸ್ನಾನ ಮಾಡಿಸುವುದಕ್ಕೆ ಈ ಬಾವಿಯ ನೀರನ್ನು ಉಪಯೋಗಿಸಬೇಕು ಎಂದು ಪ್ರವಾದಿ ಹೇಳಿದ್ದರು ಮತ್ತು ಅವರ ಅನುಯಾಯಿಗಳು ಆ ಬಳಿಕ ಅದರಂತೆ ನಡೆದುಕೊಂಡಿದ್ದರು ಎಂದು ಇತಿಹಾಸ ಹೇಳುತ್ತದೆ.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …