Home / ವಾರ್ತೆಗಳು / 2.5 ಲಕ್ಷ ರೂಪಾಯಿ ಮೌಲ್ಯದ ಬ್ಯಾಗನ್ನು ಹಿಂದಿರುಗಿಸಿದ ಬೆಂಗಳೂರಿನ ಈ ನಿಸ್ವಾರ್ಥ ಕ್ಯಾಬ್ ಚಾಲಕ

2.5 ಲಕ್ಷ ರೂಪಾಯಿ ಮೌಲ್ಯದ ಬ್ಯಾಗನ್ನು ಹಿಂದಿರುಗಿಸಿದ ಬೆಂಗಳೂರಿನ ಈ ನಿಸ್ವಾರ್ಥ ಕ್ಯಾಬ್ ಚಾಲಕ

ಬೆಂಗಳೂರು ; ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಜನರು ಒಂದಲ್ಲ ಒಂದು ರೀತಿಯಲ್ಲಿ ಕೆಲವೊಮ್ಮೆ ತಮ್ಮ ವಸ್ತುಗಳನ್ನು ಕಳೆದುಕೊಳ್ಳುತ್ತಾರೆ. ಕೆಲವೊಮ್ಮೆ ಕಳ್ಳತನವಾದರೆ, ಇನ್ನು ಕೆಲವೊಮ್ಮೆ ವಾಹನದಲ್ಲಿ ಮರೆತು ಬಿಟ್ಟು ಹೋಗುತ್ತಾರೆ. ಇಂತಹ ವಸ್ತುಗಳು ಮತ್ತೆ ಸಿಗುತ್ತದೆ ಎಂಬ ಭರವಸೆ ಹೆಚ್ಚಿನವರಿಗಿರುವುದಿಲ್ಲ. ಆದರೆ ಎಲ್ಲರೂ ಕೆಟ್ಟವರಾಗಿರುವುದಿಲ್ಲ. ಕೆಲವರು ಇತರರ ಸೊತ್ತುಗಳನ್ನು ಜೋಪಾನವಾಗಿಟ್ಟು ಅವರಿಗೆ ಮರಳಿಸುತ್ತಾರೆ. ಅಂತಹ ಓರ್ವ ಕ್ಯಾಬ್ ಡ್ರೈವರ್ ಸಾಮಾಜಿಕ ಜಾಲ ತಾಣದಲ್ಲಿ ಎಲ್ಲರ ಮನ ಗೆದ್ದಿದ್ದಾರೆ.

ಸಯೂಜ್ ರವೀಂದ್ರನ್ ಎಂಬವರು ಕ್ಯಾಬ್‌ನಲ್ಲಿ 2.5 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಮರೆತು ಹೋಗಿದ್ದರು. ಅವರು ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

ನನ್ನ ಸೋದರ ಸಂಬಂಧಿ ವಿವಾಹಕ್ಕೆ ಹೋಗಿ ಹಿಂತಿರುಗುವಾಗ, ನಾನು ಕೆ ಆರ್ ಪುರಂ ರೈಲ್ವೆ ನಿಲ್ದಾಣದಿಂದ ಓಲಾ ಕ್ಯಾಬ್ ಅನ್ನು (ನನ್ನ ಕುಟುಂಬದೊಂದಿಗೆ) ಮುಂಜಾನೆ 3: 30 ಕ್ಕೆ ಹತ್ತಿದೆ.. ಅರ್ಧ ದಾರಿಯಲ್ಲಿ, ಕಾರಿನ ಟೈರ್ ಪಂಕ್ಚರ್ ಆಯಿತು. ಟೈರ್ ಬದಲಿಸಲು ಸ್ವಲ್ಪ ಸಮಯ ಹಿಡಿಯುವುದರಿಂದ ಚಾಲಕ ಮತ್ತೊಂದು ಕ್ಯಾಬ್ ಬುಕ್ ಮಾಡಲು ನನ್ನನ್ನು ವಿನಂತಿಸಿದ. ನಾನು 10 ನಿಮಿಷಗಳಲ್ಲಿ ಇನ್ನೊಂದನ್ನು ಬುಕ್ ಮಾಡಿ ಮನೆಗೆ ತಲುಪುವಷ್ಟರಲ್ಲಿ ಮೊದಲ ಕ್ಯಾಬ್ ಡ್ರೈವರ್‌ನಿಂದ ಕರೆ ಬಂತು. ನಾನು ಕಾರಿನಲ್ಲಿ “ಹ್ಯಾಂಡ್‌ಬ್ಯಾಗ್” ಅನ್ನು ಬಿಟ್ಟಿದ್ದೇನೆ ಎಂದು ತಿಳಿಸಿದ. ಅದು ನನ್ನ ಲ್ಯಾಪ್‌ಟಾಪ್ ಬ್ಯಾಗ್ ಅದರಲ್ಲಿ ಕೆಲವು ಬೆಲೆಬಾಳುವ ವಸ್ತುಗಳು ಇದ್ದವು. ಅವರು ಅಲ್ಲಿಯೇ ನನಗಾಗಿ ಕಾಯುತ್ತಾರೆ ಎಂದು ಹೇಳಿದರು. ನಾನು ನನ್ನ ಕಾರನ್ನು ಮನೆಯಿಂದ ತೆಗೆದುಕೊಂಡು ಹಿಂದಕ್ಕೆ ಧಾವಿಸಿದೆ. ಅವನು ನನ್ನ ಮನೆಯ ಕಡೆಗೆ ಸ್ವಲ್ಪ ಮುಂದೆ ಬರುವಷ್ಟು ದಯೆ ತೋರಿಸಿದನು. ನಾವು ಮರಾಠಹಳ್ಳಿ ಸೇತುವೆಯಲ್ಲಿ ಭೇಟಿಯಾದೆವು, ಆ ಕ್ಯಾಬ್ ಚಾಲಕ ನನಗೆ ಲ್ಯಾಪ್‌ಟಾಪ್ ಬ್ಯಾಗ್ ನೀಡಿದರು. ನನ್ನ ಚೀಲವನ್ನು ಹಿಂದಿರುಗಿಸಿದ ಖತೀಬ್ ಯು ಆರ್ ರಹಮಾನ್ ರವರ ಫೋಟೋ ಸಹಿತ ಅವರು ಫೇಸ್ ಬುಕ್ ನಲ್ಲಿ ಫೋಟೋ ಹಾಕಿದ್ದು, ಈ ಫೋಟೋ ವೈರಲ್ ಆಗಿದೆ.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …