Home / ವಾರ್ತೆಗಳು / ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ಮನ್ಸೂರಿ; ಅರಬ್ ಜಗತ್ತಿನ ಮೊದಲ ವ್ಯಕ್ತಿ: ಅಲ್ಲಾಹನು ಯಶಸ್ಸು ನೀಡಲಿ ಎಂದು ಪ್ರಾರ್ಥನೆ

ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ ಮನ್ಸೂರಿ; ಅರಬ್ ಜಗತ್ತಿನ ಮೊದಲ ವ್ಯಕ್ತಿ: ಅಲ್ಲಾಹನು ಯಶಸ್ಸು ನೀಡಲಿ ಎಂದು ಪ್ರಾರ್ಥನೆ

ಕಜಾಕಿಸ್ತಾನದ ಬೈಕೊನೂರ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸೋಯುಜ್ ರಾಕೆಟ್ ಉಡಾವಣೆಗೊಂಡಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಹಜ್ಜಾ ಅಲ್-ಮನ್ಸೂರಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೇಲೆ ಇಳಿಯುವ ಮೊದಲ ಅರಬ್ ಆಗಿ ಗುರುತಿಸಿಕೊಳ್ಳಲಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹಜ್ಜಾ ಅಲ್-ಮನ್ಸೂರಿ ಅವರೊಂದಿಗೆ ರಷ್ಯಾದ ಒಲೆಗ್ ಸ್ಕ್ರಿಪೋಚ್ಕಾ ಮತ್ತು ನಾಸಾ ಗಗನಯಾತ್ರಿ ಜೆಸ್ಸಿಕಾ ಮೀರ್ ಇದ್ದಾರೆ.

ಇಂದು ನಾನು ನನ್ನ ದೇಶದ ಕನಸುಗಳನ್ನು ಮತ್ತು ಮಹತ್ವಾಕಾಂಕ್ಷೆಯನ್ನು ಸಂಪೂರ್ಣ ಹೊಸ ಆಯಾಮಕ್ಕೆ ಕೊಂಡೊಯ್ಯುತ್ತೇನೆ. ಈ ಕಾರ್ಯಾಚರಣೆಯಲ್ಲಿ ಅಲ್ಲಾಹನು ನನಗೆ ಯಶಸ್ಸನ್ನು ನೀಡಲಿ”ಎಂದು ಅವರು ಮನ್ಸೂರಿ ಟ್ವೀಟ್ ಮಾಡಿದ್ದಾರೆ.

ತಮ್ಮ ನಮಾಜ್ ನ ದಿನಚರಿಯನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ರೆಕಾರ್ಡ್ ಮಾಡಿ ಭೂಮಿಯ ಮೇಲಿನ ಜನರಿಗೆ ಪ್ರಸಾರ ಮಾಡುವುದಾಗಿಯೂ ಉಡಾವಣೆಯ ಹಿಂದಿನ ದಿನ ಅವರು ಹೇಳಿದ್ದಾರೆ.”ಫೈಟರ್ ಪೈಲಟ್ ಆಗಿ ನಾನು ಈಗಾಗಲೇ ನನ್ನ ವಿಮಾನದಲ್ಲಿ ನಮಾಜ್ ಮಾಡಿದೆ” ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 3 ರಂದು ನಾಸಾದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಿ ಒವ್ಚಿನಿನ್ ಅವರೊಂದಿಗೆ ಮನ್ಸೂರಿ ಭೂಮಿಗೆ ಮರಳಲಿದ್ದಾರೆ.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …