Home / ಲೇಖನಗಳು / ಏಕತೆಯ ಸಂದೇಶ ಸಾರುವ ಹಜ್ಜ್

ಏಕತೆಯ ಸಂದೇಶ ಸಾರುವ ಹಜ್ಜ್

ಇದು ಇಸ್ಲಾಮಿನ ಐದು ಮೂಲಭೂತ ಕಡ್ಡಾಯ ಕರ್ಮಗಳಲ್ಲಿ ಕೊನೆಯದಾಗಿರುವ ಹಜ್ ಕರ್ಮ ಎಂಬ ಮುಸ್ಲಿಮರ ಪವಿತ್ರ ಯಾತ್ರೆ.

ಇದು ವಿಶ್ವದಾದ್ಯಂತದ ಮುಸ್ಲಿಮರನ್ನು ತಮ್ಮ ಪ್ರಾರ್ಥನೆ, ಶ್ರದ್ಧೆ ಮತ್ತು ಸಮರ್ಪಣೆಯಲ್ಲಿ ಏಕೀಕರಿಸುತ್ತದೆ.

ಇಲ್ಲಿ, ಎಲ್ಲರೂ ಒಂದೆಂಬ ಭಾವನೆಯಲ್ಲಿ, ಬಣ್ಣ, ಜಾತಿ, ಭಾಷೆ, ಏನೇ ಇದ್ದರೂ, ಅಥವಾ ಅವರ ಪ್ರಾಂತ್ಯಗಳು ಯಾವುದೇ ಆಗಿದ್ದರೂ, ಎಲ್ಲರೂ ಒಂದೇ ರೀತಿಯ ಬಟ್ಟೆ ಧರಿಸಿ, ಏಕಮಾನವತ್ವದ, ಸಂಕೇತವಾಗಿ ತಮ್ಮ ಪ್ರಯಾಣಕ್ಕೆ ಅಣಿಯಾಗುತ್ತಾರೆ.

ಇದು ಬಾಂಧವ್ಯ, ಸಮಾನತೆ ಮತ್ತು ಮನುಕುಲದ ಏಕತೆಯ ಸಂದೇಶವನ್ನು ಹರಡುತ್ತದೆ.

ಇಲ್ಲಿನ ಸನ್ನಿವೇಶಗಳ ಆಧ್ಯಾತ್ಮಿಕ ವಾತಾವರಣ ಮತ್ತು ಚಿಂತನೆಗಳು ಅಲ್ಲಾಹನ ಮೇಲೆ ಅವಿಶ್ರಾಂತ ನಂಬಿಕೆಯನ್ನು ಮತ್ತು ಪರಸ್ಪರ ಸಹೋದರತ್ವದ ಮಹತ್ವವನ್ನು ತೋರಿಸುತ್ತದೆ. ಹಜ್ಜಿನ ಈ ಯಾತ್ರೆಯು ಮುಸ್ಲಿಮರ ಆಧ್ಯಾತ್ಮಿಕತೆಯನ್ನು ಶುದ್ಧೀಕರಿಸಿ, ಐಕ್ಯತೆಯನ್ನು ಮೂಡಿಸಿ ಬದುಕಿನ ಬದಲಾವಣೆಗಳಿಗೆ ದಾರಿ ತೋರಿಸುತ್ತದೆ.

ಹಜ್ಜ್ ಗುಂಪಿನಲ್ಲಿ ನೆರವೇರಿಸಲಾಗುವ ಆರಾಧನೆ. ಆದರೆ ಪ್ರತಿಯೊಬ್ಬರೂ ತಮ್ಮ ಕಾರ್ಯಗಳನ್ನು ವ್ಯಕ್ತಿಗತವಾಗಿ ನೆರವೇರಿಸಬೇಕಾಗಿದೆ. ಇದು ಪ್ರತಿಫಲದ (The day of Judgment) ದಿನದಂತೆಯೇ, ಆ ದಿನ ನಮ್ಮ ಹಿಸಾಬನ್ನು ವ್ಯಕ್ತಿಗತವಾಗಿ ಸಲ್ಲಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ ಮಾನವಕುಲಕ್ಕೆ ನೀಡಬಹುದಾದ ಸಂದೇಶ: ಹಜ್ಜ್ ನ ಮೂಲಕ ನಾವು ಗುಂಪು ಗುಂಪಾಗಿ ಸಾಗುತ್ತೇವೆಯಾದರೂ ಹಜ್ಜ್ ನ ಫ್ರತಿಯೊಂದು ಕರ್ಮವನ್ನು ವ್ಯಯಕ್ತಿಕವಾಗಿ ನಿರ್ವಹಿಸಬೇಕಾಗಿದೆ. ನಮ್ಮ ವಿಶ್ವಾಸ, ನಮ್ಮ ನಂಬಿಕೆ, ನೈತಿಕತೆ, ಮತ್ತು ಕರ್ತವ್ಯವನ್ನು ವ್ಯಕ್ತಿಗತವಾಗಿ ನಿರ್ವಹಿಸಬೇಕು. ಇದು ನಮ್ಮ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಎತ್ತಿಕೊಳ್ಳಬೇಕೆಂಬ ಮಹತ್ವದ ಪಾಠವನ್ನು ಕಲಿಸುತ್ತದೆ.

ನಾವೆಲ್ಲರೂ ಜಗತ್ತಿನಲ್ಲಿ ಪರಸ್ಪರ ಬಾಂಧವ್ಯ ಮತ್ತು ಸಹೋದರತ್ವದಲ್ಲಿ ಬಾಳಬೇಕು, ಆದರೆ ನಮ್ಮ ಕೃತ್ಯಗಳ ಲೆಕ್ಕವನ್ನು ನಮ್ಮದೇ ಆದ ನಡವಳಿಕೆಯಿಂದ, ನಮ್ಮ ವ್ಯಕ್ತಿತ್ವದ ಆಧಾರದಲ್ಲಿ ಸಲ್ಲಿಸಬೇಕಾಗುತ್ತದೆ .

ಹಜ್ಜ್ ನಮಗೆ ನಮ್ಮ ಜೀವನದ ಓಡಾಟದಲ್ಲಿ ಪವಿತ್ರತೆ, ಸರಳತೆ, ಮತ್ತು ಧಾರ್ಮಿಕತೆ ಕಾಪಾಡುವ ಮಹತ್ವವನ್ನು ಪ್ರತಿಪಾದಿಸುತ್ತದೆ, ಇದರಿಂದ ನಾವು ಪ್ರಪಂಚದಲ್ಲಿ ಶಾಂತಿ ಮತ್ತು ಸಮಾನತೆಯನ್ನು ಕಾಪಾಡುವ ಮಹತ್ತರ ಪಾಠವನ್ನು ಕಲಿಸುತ್ತದೆ.

ಹಜ್ಜ್ ಮುಗಿಸಿ ತಮ್ಮ ತಾಯ್ನಾಡಿಗೆ ಹಿಂದಿರುಗುವವರು ಹಲವು ಅನುಭವಗಳನ್ನು ತರುತ್ತಾರೆ.

ಹಜ್ಜ್ ನಲ್ಲಿ ಅವರು ಅನುಭವಿಸಿದ ಏಕತೆಯ ಸಂಕೇತ, ಸಹೋದರತ್ವ, ಸಮಾನತೆ ಮತ್ತು ಶ್ರದ್ಧೆಯನ್ನು ತಮ್ಮ ಸಮಾಜಕ್ಕೆ ತರುವ ಮೂಲಕ, ಅವರು ಇತರರಿಗೆ ಆದರ್ಶಪ್ರಾಯರಾಗುತ್ತಾರೆ.

ಹಜ್ಜ್ ನ ಅನುಭವವು ಅವರನ್ನು ಆಧ್ಯಾತ್ಮಿಕವಾಗಿ, ಮಾನಸಿಕವಾಗಿ, ಮತ್ತು ನೈತಿಕವಾಗಿ ಬದಲಾಯಿಸುತ್ತದೆ. ತಮ್ಮ ಆಂತರಿಕ ಶುದ್ಧೀಕರಣದ ಮೂಲಕ, ಅವರು ಸಮಾಜದಲ್ಲಿ ಶಾಂತಿ, ಸಹನಶೀಲತೆ, ಮತ್ತು ಶ್ರದ್ಧೆಯನ್ನು ಹರಡಲು ಪ್ರಯತ್ನಿಸುತ್ತಾರೆ.

ಈ ವರ್ಷ ಹಜ್ಜ್ ನಲ್ಲಿ ಹಲವರು ಮೃತಪಟ್ಟಿದ್ದಾರೆ. ತಮ್ಮ ಗುಂಪಿನಿಂದ ಕಳೆದು ಹೋದವರು, ಅದು ತುಂಬಾ ದುಃಖದ ಸಂಗತಿ. ಹಜ್ಜ್ ಗೆ ಹೋಗುವಾಗ ಜೊತೆಗಿದ್ದವರು ಹಿಂತಿರುಗುವಾಗ ಕುಟುಂಬದ ಸದಸ್ಯರನ್ನು ಕಳೆದುಕೊಂಡಿರುವ ನೋವು ಹೇಳತೀರದು. ಅವರು ಜೊತೆಯಾಗಿ ಹಜ್ ನಡೆಸಿದರೂ, ಹಿಂತಿರುಗುವಾಗ ತಮ್ಮ ಜನರನ್ನು ಕಳೆದುಕೊಂಡಿದ್ದರಿಂದ ಆ ನೋವು ಮತ್ತು ವಿಷಾದವು ಅವರೊಂದಿಗೆ ಉಳಿಯುತ್ತದೆ.

ಹಜ್ಜ್ ನ ಅನುಭವದ ಮೂಲಕ, ಅವರು ಬಾಳಿನಲ್ಲಿ ಧೈರ್ಯ, ಶ್ರದ್ಧೆ, ಮತ್ತು ಸಮಾನತೆಯ ಹಾದಿಯಲ್ಲಿ ನಡೆದುಕೊಳ್ಳುವ ದಾರಿಯನ್ನು ಕಲಿಯುತ್ತಾರೆ. ಹಜ್ಜ್ ಮುಗಿದ ಮೇಲೆ ಅವರ ಜೀವನದ ಬದಲಾವಣೆಗಳು, ಅವರ ನೈತಿಕತೆ, ಮತ್ತು ಸಮುದಾಯದ ಸೇವೆಯಲ್ಲಿ ಪ್ರತಿಫಲಿಸುತ್ತವೆ.

✍️ರೈಹಾನ್.ವಿ.ಕೆ

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಕ್ಷಮೆ

✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ …