Home / ವಾರ್ತೆಗಳು / ಬಹ್ರೈನ್ ಶೃಂಗದಲ್ಲಿ ಇಸ್ರೇಲ್ ಪ್ರಾತಿನಿದ್ಯ ವಿರೋಧಿಸಿದ ಹಮಾಸ್

ಬಹ್ರೈನ್ ಶೃಂಗದಲ್ಲಿ ಇಸ್ರೇಲ್ ಪ್ರಾತಿನಿದ್ಯ ವಿರೋಧಿಸಿದ ಹಮಾಸ್

ಮನಾಮ, ಅ.21: ಬಹ್ರೈನ್‍ನಲ್ಲಿ ನಡೆಯುವ ಸಮುದ್ರ ತೀರದ ಸುರಕ್ಷಿತತೆಗೆ ಸಂಬಂಧಿಸಿದ ಶೃಂಗದಲ್ಲಿ ಇಸ್ರೇಲಿನ ಪ್ರಾತಿನಿಧ್ಯವನ್ನು ಹಮಾಸ್ ವಿರೋಧಿಸಿದೆ.

ಸೋಮವಾರ ಅಮೆರಿಕದ ನೇತೃತ್ವದಲ್ಲಿ ಹಡಗು ಮೇಲೆ ದಾಳಿಯ ಬೆದರಿಕೆಯ ಕುರಿತು ಚರ್ಚಿಸಲು ಶೃಂಗ ಸಮ್ಮೇಳನ ನಡೆಯುತ್ತಿದೆ. ಶೃಂಗದಲ್ಲಿ ಇಸ್ರೇಲ್ ಭಾಗವಹಿಸುವುದನ್ನು ಹಮಾಸ್ ಖಂಡಿಸಿದೆ.

ಇದು ವಲಯದ ಸುರಕ್ಷೆ ಮತ್ತು ಇಸ್ರೇಲಿನ ಅತಿಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ವೈಫಲ್ಯವಾಗಿದೆ ಎಂದು ಹಮಾಸ್ ವಕ್ತಾರ ಹಸೀಂ ಖಾಸಿಂ ಹೇಳಿದರು. ಈ ರೀತಿ ಇಸ್ರೇಲಿನೊಂದಿಗಿನ ಸಂಬಂಧವನ್ನು ಎಲ್ಲರೂ ಸಹಜದ್ದಾಗಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಶೃಂಗಕ್ಕೆ ಇಸ್ರೇಲ್ ಪ್ರತಿನಿಧಿಗಳನ್ನು ಕಳುಹಿಸಲಿದೆ ಎಂದು ಚ್ಯಾನೆಲ್ 13 ವರದಿ ಮಾಡಿತ್ತು.

ಪರ್ಶಿಯ ಗಲ್ಫ್ ನಲ್ಲಿ ಇರಾನ್‍ನ ಬೆದರಿಕೆ ಎದುರಿಸುವ ನೆಪದಲ್ಲಿ ಅಮೆರಿಕ ನೇತೃತ್ವದಲ್ಲಿ ಇರಾನ್ ವಿರೋಧಿ ಸಮ್ಮೇಳನ ಎರಡು ದಿವಸಗಳಿಂದ ಬಹ್ರೈನ್‍ನಲ್ಲಿ ನಡೆಯುತ್ತಿದೆ. ಬಹ್ರೈನ್ ಮತ್ತು ಇಸ್ರೇಲ್ ಪರಸ್ಪರ ರಾಜತಾಂತ್ರಿಕ ಸಂಬಂಧವನ್ನು ಹೊಂದಿಲ್ಲ.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …