Home / ವಾರ್ತೆಗಳು / ಆಂಧ್ರ ಸರಕಾರದಿಂದ ಇಮಾಮರಿಗೆ ಮನೆ ಕಟ್ಟಲು ಸ್ಥಳ ನೀಡುವ ಯೋಜನೆ

ಆಂಧ್ರ ಸರಕಾರದಿಂದ ಇಮಾಮರಿಗೆ ಮನೆ ಕಟ್ಟಲು ಸ್ಥಳ ನೀಡುವ ಯೋಜನೆ

ವಿಜಯವಾಡ, ಅ.21: ಸ್ವಂತ ಮನೆ, ಹಾಗೂ ಜಮೀನಿಲ್ಲದ, ಬಡತನ ರೇಖೆಗಿಂತ ಕೆಳಗಿರುವ ಮಸೀದಿ ಇಮಾಮರಿಗೆ ಸ್ಥಳವನ್ನು ಒದಗಿಸುವ ಯೋಜನೆಯನ್ನು ಆಂಧ್ರ ಸರಕಾರ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ.

ಆಂಧ್ರ ಪ್ರದೇಶ ವಕ್ಫ್ ಬೋರ್ಡಿನ ಅಧೀನದಲ್ಲಿ ಯೋಜನೆಗೆ ರೂಪು ನೀಡಲಾಗಿದ್ದು ಅರ್ಹ ಫಲಾನುಭವಿಗಳು ಸಂಬಂಧಿಸಿದ ವಾರ್ಡ್ ಮೆಂಬರ್ ಅಥವಾ ಪಂಚಾಯತ್‍ನಿಂದ ದೃಢೀಕರಣ ಪತ್ರ ಪಡೆದು ಅದರೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಆಂಧ್ರ ವಕ್ಫ್ ಬೋರ್ಡು ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಸಯ್ಯಿದ್ ಶಬ್ಬೀರ್ ಭಾಷ ತಿಳಿಸಿದ್ದಾರೆ.

ಆಂಧ್ರ ಪ್ರದೇಶದ ಐದು ಸಾವಿರ ಇಮಾಮರಿಗೆ ಈ ಯೋಜನೆಯ ಲಾಭ ಪಡೆಯುವ ಅವಕಾಶ ಇದೆ. ಚಿಕ್ಕ ವರಮಾನದಿಂದ ಮಸೀದಿಯಲ್ಲಿ ಕೆಲಸ ಮಾಡುತ್ತಿರುವ ಇಮಾಮರಲ್ಲಿ ಹೆಚ್ಚಿನವರಿಗೆ ಮನೆಯಿಲ್ಲ. ಈ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …