Home / ವಾರ್ತೆಗಳು / ಬ್ಯಾಂಕ್ ಸಾಲ ತೀರಿಸಲಾಗದೆ ಮನೆ ಕಳಕೊಳ್ಳುವ ಭೀತಿಯಲ್ಲಿದ್ದ ಸಂಧ್ಯಾ ಕುಟುಂಬ: ಸಾಲ ತೀರಿಸಿದ ಲುಲು ಯೂಸುಫ್ ಅಲಿ

ಬ್ಯಾಂಕ್ ಸಾಲ ತೀರಿಸಲಾಗದೆ ಮನೆ ಕಳಕೊಳ್ಳುವ ಭೀತಿಯಲ್ಲಿದ್ದ ಸಂಧ್ಯಾ ಕುಟುಂಬ: ಸಾಲ ತೀರಿಸಿದ ಲುಲು ಯೂಸುಫ್ ಅಲಿ

ಪ್ರಸಿದ್ಧ ಲುಲು ಗ್ರೂಪ್ ನ ಚೇರ್ಮನ್ ಯೂಸುಫ್ ಅಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಬ್ಯಾಂಕ್ ಸಾಲ ಕಟ್ಟಲಾಗದೆ ತನ್ನ ಮನೆಯನ್ನು ಕಳಕೊಳ್ಳುವ ಭೀತಿಯಲ್ಲಿದ್ದ ಎರಡು ಮಕ್ಕಳ ತಾಯಿ ಸಂಧ್ಯಾ ಅವರ ನೆರವಿಗೆ ಧಾವಿಸಿದ್ದಾರೆ.. 8 ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ ಸಾಲವನ್ನು ಈ ಸಂಧ್ಯ ಬ್ಯಾಂಕಿಗೆ ಕಟ್ಟಬೇಕಿತ್ತು. ಆದರೆ ಆರ್ಥಿಕ ಅಡಚಣೆಯಿಂದ ಸಂಧ್ಯಾ ಅವರಿಗೆ ಇದನ್ನು ಕಟ್ಟಲು ಸಾಧ್ಯವಾಗಲಿಲ್ಲ. ಇದೀಗ ಯೂಸಫ್ ಅಲಿ ಅವರು 10 ಲಕ್ಷ ರೂಪಾಯಿಯನ್ನು ಸಂಧ್ಯಾ ಅವರಿಗೆ ನೀಡಿ ಅವರ ಸಂಕಟಕ್ಕೆ ನೆರವಾಗಿದ್ದಾರೆ.

2019 ರಲ್ಲಿ ಈ ಸಂಧ್ಯ ಕುಟುಂಬವು ಮನೆ ನಿರ್ಮಿಸುವುದಕ್ಕಾಗಿ 4ಲಕ್ಷ ರೂಪಾಯಿಯನ್ನು ಬ್ಯಾಂಕಿನಿಂದ ಸಾಲವಾಗಿ ಪಡೆದುಕೊಂಡಿತ್ತು. ಆದರೆ 2022ರಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಸಂಧ್ಯ ಅವರ ಪತಿ ಸಾವಿಗೀಡಾದರು. ಇದರಿಂದಾಗಿ ಮನೆ ನಿರ್ವಹಣೆಯ ಹೊಣೆಗಾರಿಕೆ ಮತ್ತು ಸಾಲದ ಕಂತು ಕಟ್ಟುವ ಹೊಣೆಗಾರಿಕೆ ಎರಡು ಕೂಡ ಸಂಧ್ಯ ಅವರ ಮೇಲೆ ಬಿತ್ತು. ಆದರೆ ಸಂಧ್ಯಾ ಅವರಿಗೆ ಸಾಲದ ಕಂತು ಕಟ್ಟಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರ ಮನೆ ಜಪ್ತಿಯ ಹಂತಕ್ಕೆ ಬಂತು.

ಈ ಸಂಗತಿಯನ್ನು ತಿಳಿದ ಯೂಸುಫ್ ಅಲಿಯವರು ಸಂಧ್ಯಾ ಅವರ ನೆರವಿಗೆ ಬಂದಿದ್ದಾರೆ. ಅವರು ಸಾಲದ ಮೊತ್ತವನ್ನು ತೀರಿಸಿದ್ದಲ್ಲದೆ ಹೆಚ್ಚುವರಿ ಒಂದೂವರೆ ಲಕ್ಷ ರೂಪಾಯಿಯನ್ನು ಈ ಸಂಧ್ಯಾ ಕುಟುಂಬಕ್ಕೆ ನೀಡಿ ಹೃದಯವೈಶಾಲ್ಯತೆ ಮೆರೆದಿದ್ದಾರೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದ್ (ಸ) ಲೇಖನ ಸಂಕಲನ ಬಿಡುಗಡೆ

ಪ್ರವಾದಿ ಮುಹಮ್ಮದ್ (ಸ) ರವರ ಬದುಕು ಮತ್ತು ಸಂದೇಶಗಳ ಬಗ್ಗೆ ವಿಶ್ವ ವಿಖ್ಯಾತ ಲೇಖಕರು, ಚಿಂತಕರು, ಮೇಧಾವಿಗಳು ಹಾಗೂ ನಾಡಿನ …