Home / ವಾರ್ತೆಗಳು / ಸ್ವ ಉದ್ಯೋಗಕ್ಕಾಗಿ ಅಂಗಡಿ – ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ನ ಕೊಡುಗೆ

ಸ್ವ ಉದ್ಯೋಗಕ್ಕಾಗಿ ಅಂಗಡಿ – ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ನ ಕೊಡುಗೆ

ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ಇದರ ವತಿಯಿಂದ, ಸ್ವ‌ಉದ್ಯೋಗದ ಯೋಜನೆಯಡಿ, ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಸೇವಂತಿಗುಡ್ಡೆ ಎಂಬಲ್ಲಿ, ದಾನಿಗಳ ನೆರವಿನಿಂದ ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಅಂಗಡಿಯೊಂದನ್ನು ಬಡ ಕುಟುಂಬವೊಂದಕ್ಕೆ ಹಸ್ತಾಂತರಿಸಲಾಯಿತು.

ಈ ಸರಳ ಕಾರ್ಯಕ್ರಮವನ್ನು ಜಮಾಅತೆ ಇಸ್ಲಾಮೀ ಹಿಂದ್‌ ರಾಜ್ಯ ಸಲಹಾ ಸಮಿತಿಯ ಮಾಜಿ ಸದಸ್ಯರಾದ ಜ| ಕೆ. ಎಮ್. ಶರೀಫ್‌ರವರು ಉದ್ಘಾಟಿಸಿ ಜಮಾಅತೆ ಇಸ್ಲಾಮೀ ಹಿಂದ್‌ನ ಧ್ಯೇಯೋದ್ದೇಶವನ್ನು ಪರಿಚಯಿಸಿದರು.

ಸ್ಥಳೀಯ ನಗರಸಭಾ ಸದಸ್ಯರಾದ ಜ| ಮುಷ್ತಾಕ್ ಪಟ್ಲ ಮತ್ತು ಉಳ್ಳಾಲ ಜಮಾಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷರಾದ ಜ| ಅಬ್ದುಲ್ ಕರೀಮ್‌ರವರು ಶುಭ ಹಾರೈಸಿದರು.

ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ನಗರಾಧ್ಯಕ್ಷರಾದ ಜ| ಕೆ. ಎಂ. ಅಶ್ರಫ್‌ರವರು ಸಮಾರೋಪ ನುಡಿಗಳನ್ನಾಡಿ ಸರ್ವರಿಗೂ ಪ್ರಾರ್ಥಿಸಿದರು.

ಉಳ್ಳಾಲ ಮತ್ತು ಮಂಗಳೂರು ಸಮಾಜ ಸೇವಾ ಘಟಕದ ಸಂಚಾಲಕರುಗಳಾದ ಜ| ಅಬ್ದುಸ್ಸಲಾಮ್‌ ಸಿ. ಎಚ್. ಮತ್ತು ಅಬ್ದುಲ್‌ ಗಫೂರ್‌ ಕುಳಾಯಿ ಉಪಸ್ಥಿತರಿದ್ದರು.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …