Home / ವಾರ್ತೆಗಳು / ಹಿಂದ್ ರಜಬ್ ಬಗ್ಗೆ ನಿಮಗೇನು ಗೊತ್ತು?

ಹಿಂದ್ ರಜಬ್ ಬಗ್ಗೆ ನಿಮಗೇನು ಗೊತ್ತು?

✍️ ಪಿ.ಕೆ. ನಿಯಾಝ್

ಗಾಝಾದ ಬಗ್ಗೆ ಮಾತನಾಡುವಾಗ ಹಿಂದ್ ರಜಬ್ ಎಂಬ ಆರು ವಯಸ್ಸಿನ ಬಾಲಕಿ ಆಡಿದ ಮಾತುಗಳು ಕಿವಿಯಲ್ಲಿ ಸದಾ ಗುಂಯ್‌ಗುಡುತ್ತಿರುತ್ತದೆ.

ಒಂದು ಕಾರಿನಲ್ಲಿ ಸಂಚರಿಸುತ್ತಿದ್ದ ಆ ಬಾಲಕಿಯ ಜೊತೆ ಹದಿನೈದರ ಹರೆಯದ ಮತ್ತೋರ್ವ ಸಂಬಂಧಿಕಳಾದ ಲಯಾನ್ ಹಮದ ಕೂಡಾ ಇದ್ದಳು. ಇವರು ಸಂಚರಿಸುತ್ತಿದ್ದ ಕಾರಿನ ಮೇಲೆ ಇಸ್ರೇಲ್ ಪಡೆ ಗುಂಡಿನ ಮಳೆಗೆರೆಯುತ್ತದೆ. ಈರ್ವರೂ ಶಹೀದ್ ಆಗುತ್ತಾರೆ. 355 ಮದ್ದು ಗುಂಡುಗಳನ್ನು ಅವರ ಕಾರನ್ನು ಗುರಿಯಾಗಿರಿಸಿ ಹಾರಿಸಲಾಗಿತ್ತು. ಈ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ವರದಿಗಳು ತಿಳಿಸುತ್ತಿವೆ.

ಇದು ಪುಟ್ಟ ಕಂದಮ್ಮಗಳ ಮಾರಣಹೋಮ ನಡೆಸುವ ಇಸ್ರೇಲೀ ಕ್ರೌರ‍್ಯದ ಹೊಸ ಮುಖದ ಅನಾವರಣವಾಗಿದೆ. ಬ್ರಿಟನ್ ಕೇಂದ್ರೀಕರಿಸಿಕೊಂಡು ಸಕ್ರಿಯವಾಗಿ ಚಟುವಟಿಕೆಯಲ್ಲಿರುವ ಫೊರೆನ್ಸಿಕ್ ಆರ್ಕಿಟೆಕ್ಚರ್ ಎಂಬ ಸಂಶೋಧನಾ ಸಂಸ್ಥೆ, ಅಲ್ ಜಝೀರಾದ ಫೌಲ್ಟ್ ಲೈನ್ಸ್ಇಯರ್ ಶೋಟ್ ಎಂಬ ಎನ್.ಜಿ.ಓ. ಸಂಸ್ಥೆಗಳ ನೆರವಿನಿಂದ ನಡೆಸಲಾದ ಫ್ಲೊರೆನ್ಸಿಕ್ ತನಿಖೆಯಲ್ಲಿ ಇದು ಬೆಳಕಿಗೆ ಬಂದಿದೆ.

ಮೆರ್ಕಾವಾ ಟ್ಯಾಂಕರಲ್ಲಿ ನಿಮಿಷಕ್ಕೆ 750ರಿಂದ 900 ಸುತ್ತುಗಳ ವರೆಗೆ ಗುಂಡು ಹಾರಿಸುವ ಸಾಮರ್ಥ್ಯವುಳ್ಳ ಎಂ-4 ಅಥವಾ ಎಫ್‌ಎನ್ ಮಾಗ್ ಯಾಂತ್ರಿಕ ಗನ್ನುಗಳನ್ನು ಬಳಸಿ ಈ ಭಯಾನಕ ಹತ್ಯೆ ನಡೆಸಲಾಗಿದೆ ಎಂದು ವರದಿಗಳು ಬಹಿರಂಗ ಪಡಿಸಿದೆ.

ಹಿಂದ್ ರಜಬ್ ಬಗ್ಗೆ ನಿಮಗೆ ತಿಳಿದಿಲ್ಲವೇ? ಭಯಾನಕವಾದ ಶೆಲ್ ದಾಳಿಯಿಂದ ರಕ್ಷಣೆಗಾಗಿ ಆಕೆ ಮತ್ತು ಆಕೆಯ ಕುಟುಂಬಸ್ಥರು ಜೊತೆಯಾಗಿ ವಲಸೆ ಹೋಗುತ್ತಿದ್ದರು. ಹವಾಮಾನ ವೈಪರೀತ್ಯದಿಂದ ಪುಟ್ಟ ಮಗಳು ಮತ್ತು ಆಕೆಯ ಸಂಬಂಧಿಕರ ಜೊತೆ ಸೇರಿಸಿ ಕಾರಿನಲ್ಲಿ ಕುಳ್ಳಿರಿಸಿ ಕಳುಹಿಸಿದ್ದರು.

ತಾಯಿ ವಿಝಾಮ್ ರಜಬ್ ಮತ್ತು ಕುಟುಂಬದ ಸದಸ್ಯರು ಕಾಲ್ನಡಿಗೆಯಲ್ಲಿಯೇ ಪ್ರಯಾಣ ಹೊರಟಿದ್ದರು. ಬಾಂಬ್ ದಾಳಿಯು ವ್ಯಾಪಕಗೊಂಡಾಗ ಇವರು ಬೇರ್ಪಟ್ಟರು. ಹಿಂದ್‌ನ ಹದಿನೈದರ ಹರೆಯದ ಸಹ ಯಾತ್ರಿಕೆ ಬಂದು ಲಯಾನ್ ಫೆಲೆಸ್ತೀನ್ ರೆಡ್ ಕ್ರೆಸೆಂಟ್‌ಗೆ ಈ ಸಂದೇಶ ರವಾನಿಸಿದಾಗ ಇವರ ಕುರಿತ ವರದಿಗಳು ಬಹಿರಂಗಗೊಂಡವು.

ಇಸ್ರೇಲಿನ ಬಾಂಬ್ ದಾಳಿಗೆ ಸಿಲುಕಿ ವಾಹ ನದಲ್ಲಿದ್ದ ಇತರರೆಲ್ಲರೂ ಮರಣ ಹೊಂದಿದ್ದಾರೆಂದೂ ತಾನು ಮತ್ತು ಆರರ ಹರೆಯದ ಹಿಂದ್ ತೀವ್ರ ಗಾಯಗಳೊಂದಿಗೆ ಬದುಕುಳಿದಿರುವುದಾಗಿ ಹೇಳಿದ ಸಂದೇಶವು ಬಂತು. ಟ್ಯಾಂಕುಗಳು ಐನೂರು ಮೀಟರ್ ಅಂತರದಲ್ಲಿರುವುದಾಗಿಯೂ ಕೂಡಲೇ ನೆರವಾಗಬೇಕೆಂದು ಆ ಸಂದೇಶದಲ್ಲಿ ತಿಳಿಸಲಾಗಿತ್ತು.

“ನನಗೆ ಭಯವಾಗುತ್ತಿದೆ. ನನ್ನನ್ನು ಯಾರಾದರೂ ಬಂದು ಕಾಪಾಡಿ” ಎಂದು ಹಿಂದ್ ರಜಬ್ ವಿಹ್ವಲರಾಗಿ ಗೋಗರೆಯುವ ಮಾತುಗಳೂ ಆ ರೆಕಾರ್ಡ್ನಲ್ಲಿ ಕೇಳಿ ಬಂದಿದೆ. ಸಂದೇಶ ತಲುಪಿದಾಕ್ಷಣವೇ ಆಂಬುಲೆನ್ಸ್ ಹೊರಟರೂ ದಾರಿ ಮಧ್ಯೆ ದಾಳಿಗೆ ಗುರಿಯಾಯಿತು. ಇಸ್ರೇಲ್ ಪಡೆಯ ಬಾಂಬ್ ದಾಳಿಗೆ ಯೂಸುಫ್ ಸೈನೋ, ಅಹ್ಮದ್ ಅಲ್ ಮದ್ಹೂನ್ ಮುಂತಾದ ಪ್ಯಾರಾ ಮೆಡಿಕಲ್ ಸ್ವಯಂ ಸೇವಕರೂ ಕೊಲ್ಲಲ್ಪಟ್ಟರು. ಆ ದೃಶ್ಯವು ಅತೀ ಭಯಾನಕವಾಗಿತ್ತು.

ಜನವರಿ 29 ರಂದು ಈ ಘಟನೆ ನಡೆದಿತ್ತು. ಮೊದಲು ಹಿಂದ್ ನಾಪತ್ತೆಯಾಗಿದ್ದಾಳೆಂಬ ವರದಿ ಬಂತು. 12 ದಿವಸಗಳ ವರೆಗೆ ಆಕೆಯ ಕುರಿತು ಯಾವುದೇ ವಿವರಗಳು ದೊರೆತಿರಲಿಲ್ಲ. ಫೆಬ್ರವರಿ ಹನ್ನೊಂದರಂದು ಆ ಕರುಳು ಮಿಡಿಯುವ ವಾರ್ತೆಯನ್ನು ಜಗತ್ತು ಅರಿಯಿತು.

SHARE THIS POST VIA

About editor

Check Also

ಪ್ರವಾದಿಯ ಸಮಾಧಿ ದರ್ಶನಕ್ಕೆ ತೆರೆದ ‘ಶಾಂತಿಯ ದಾರಿ’: ಆರು ನಿಮಿಷ ಸಮಾಧಿ ವೀಕ್ಷಣೆಗೆ ಅವಕಾಶ

ಪ್ರವಾದಿಯವರ ಸಮಾಧಿಗೆ ಭೇಟಿ ನೀಡುವವರ ಸೌಲಭ್ಯಕ್ಕಾಗಿ ಶಾಂತಿಯ ದಾರಿ ಎಂಬ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ತೀವ್ರ ಜನಸಂದಣಿಯಿಂದಾಗಿ ಜನರಿಗೆ …