Home / ವಾರ್ತೆಗಳು / ಮರಗಳನ್ನು ಕಡಿಯುವುದರ ಹಾಗೂ ಸುಡುವುದರ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಮಿಕ್ ಸೆಮಿನರಿ

ಮರಗಳನ್ನು ಕಡಿಯುವುದರ ಹಾಗೂ ಸುಡುವುದರ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಮಿಕ್ ಸೆಮಿನರಿ

ಮರಗಳನ್ನು ಕಡಿಯುವುದರ ಮತ್ತು ಬೆಳೆಗಳನ್ನು ಸುಡುವುದರ ವಿರುದ್ಧ ಇಸ್ಲಾಮಿಕ್ ಸೆಮಿನರಿಯೊಂದು ಫತ್ವಾ (ಇಸ್ಲಾಂನಲ್ಲಿ ಅರ್ಹ ಕಾನೂನು ವಿದ್ವಾಂಸರು ಅಥವಾ ಮುಫ್ತಿ ನೀಡಿದ ಇಸ್ಲಾಮಿಕ್ ಕಾನೂನಿನ ಒಂದು ಅಂಶದ ಮೇಲೆ ಔಪಚಾರಿಕ ತೀರ್ಪು) ಹೊರಡಿಸಿದೆ.

ಲಕ್ನೋದ ಇಸ್ಲಾಮಿಕ್ ಸೆಮಿನರಿಯು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ಭಾಗವಾಗಿ ಮರಗಳನ್ನು ಕಡಿಯಬೇಡಿ ಮತ್ತು ಬೆಳೆಗಳನ್ನು ಸುಡಬೇಡಿ ಎಂದು ಫತ್ವಾ ಹೊರಡಿಸಿದೆ.

ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದ (ಐಸಿಐ) ಮೊಹಮ್ಮದ್ ತಾರಿಕ್ ಖಾನ್ ಎಂಬಾತ ತಾಪಮಾನದ ಕುರಿತು ಸ್ಪಷ್ಟೀಕರಣ ಕೇಳಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಇಸ್ಲಾಮಿಕ್ ಸೆಮಿನರಿ ಈ ಸಲಹೆಯಾಗಿ ಈ ಫತ್ವಾ ಜಾರಿ ಮಾಡಿದೆ.

“ಕುರ್ ಆನ್‌ನ ಪ್ರಕಾರ, ಹಸಿರನ್ನು ರಕ್ಷಿಸುವುದು, ನೀರನ್ನು ಉಳಿಸುವುದು ಮತ್ತು ವ್ಯರ್ಥ ಮಾಡುವುದನ್ನು ತಪ್ಪಿಸುವುದು ಮುಸ್ಲಿಮರ ಧಾರ್ಮಿಕ ಕರ್ತವ್ಯವಾಗಿದೆ. ಪ್ರತಿಯೊಬ್ಬ ಮುಸ್ಲಿಮರು ಹಸಿರು ಮರಗಳನ್ನು ಕಡಿಯಬಾರದು ಮತ್ತು ಬೆಳೆಗಳಿಗೆ ಬೆಂಕಿ ಹಾಕದಂತೆ ನೋಡಿಕೊಳ್ಳಬೇಕು” ಎಂದು ಐಸಿಐನ ಅಧ್ಯಕ್ಷ ಮೌಲಾನಾ ಖಾಲಿದ್ ರಶೀದ್ ಫರಂಗಿ ಮಹಾಲಿ ಹೇಳಿದರು.

ವೀಡಿಯೊ ಸಂದೇಶದಲ್ಲಿ, ಮೌಲಾನಾ ಖಾಲಿದ್ ರಶೀದ್ ಜನರು ಹೆಚ್ಚು ಸಸಿಗಳನ್ನು ನೆಡಬೇಕು ಮತ್ತು ಮರಗಳನ್ನು ಕಡಿಯುವುದನ್ನು ತಪ್ಪಿಸಬೇಕು ಎಂದು ಕರೆ ನೀಡಿದ್ದಾರೆ.

“ಸರ್ವಶಕ್ತನ ಪ್ರಕಾರ, ಮನುಷ್ಯರು ಮತ್ತು ಪ್ರಾಣಿಗಳು ಸೇರಿದಂತೆ ಎಲ್ಲಾ ಜೀವಿಗಳಿಗೆ ಅನುಕೂಲವಾಗುವ ಸಸಿಗಳನ್ನು ನೆಡುವವರಿಗೆ ಪ್ರತಿಫಲವಿದೆ. ಕೊಳಗಳು, ಕಾಲುವೆಗಳು, ನದಿಗಳು ಮತ್ತು ಸಮುದ್ರಗಳನ್ನು ಕಲುಷಿತಗೊಳಿಸದಂತೆ ಉಳಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ” ಎಂದು ತಿಳಿಸಿದ್ದಾರೆ.

“ಇಸ್ಲಾಂನಲ್ಲಿ ಮರಗಳನ್ನು ಕಡಿಯುವುದು ಪಾಪವಾಗಿದೆ. ಯುದ್ಧದ ಸಂದರ್ಭದಲ್ಲಿಯೂ ಮರ, ಗಿಡಗಳನ್ನು ನಾಶ ಮಾಡುವಂತಿಲ್ಲ, ಸುಡುವಂತಿಲ್ಲ” ಎಂದು ಹೇಳಿದರು.

SHARE THIS POST VIA

About editor

Check Also

“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ

ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ …