Home / ವಾರ್ತೆಗಳು / ಜುಲೈ 8, ಸೋಮವಾರ, ಮುಹರ್ರಂ ತಿಂಗಳ ಆರಂಭ

ಜುಲೈ 8, ಸೋಮವಾರ, ಮುಹರ್ರಂ ತಿಂಗಳ ಆರಂಭ

ಮಂಗಳೂರು, ಜುಲೈ 6: ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಮುಹರಂ ತಿಂಗಳ ಪ್ರಥಮ ಚಂದ್ರದರ್ಶನವಾದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಜು.7ರ ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ಮುಹರಂ 1 ಆಗಲಿರುವುದಾಗಿ ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್ಲಾಜ್ ತ್ವಾಖಾ ಅಹ್ಮದ್ ಮುಸ್ಲಿಯಾ‌ರ್ ತಿಳಿಸಿದ್ದಾರೆ.

ಜು.16ರಂದು ಮುಹರಂ 9 ತಾಸೂಆ ಹಾಗೂ ಜು.17ರಂದು ಮುಹರಂ 10 ಆಶೂರಾಅ್ ದಿನವಾಗಿರುತ್ತದೆ. ಆ ದಿನ ಉಪವಾಸ ಸುನ್ನತ್ ಆಗಿದೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡು ತಿಂಗಳುಗಳಲ್ಲಿ ಪ್ರಥಮ ತಿಂಗಳಾಗಿದೆ ಮುಹರ್ರಂ, ಇದು ಹೊಸ ವರ್ಷದ ಆರಂಭವೂ ಹೌದು.

SHARE THIS POST VIA

About editor

Check Also

ಪ್ರವಾದಿಯ ಸಮಾಧಿ ದರ್ಶನಕ್ಕೆ ತೆರೆದ ‘ಶಾಂತಿಯ ದಾರಿ’: ಆರು ನಿಮಿಷ ಸಮಾಧಿ ವೀಕ್ಷಣೆಗೆ ಅವಕಾಶ

ಪ್ರವಾದಿಯವರ ಸಮಾಧಿಗೆ ಭೇಟಿ ನೀಡುವವರ ಸೌಲಭ್ಯಕ್ಕಾಗಿ ಶಾಂತಿಯ ದಾರಿ ಎಂಬ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ತೀವ್ರ ಜನಸಂದಣಿಯಿಂದಾಗಿ ಜನರಿಗೆ …